ಮಂಗಳೂರು, ಉದಯವಾಹಿನಿ : ಧರ್ಮಸ್ಥಳ ಬುರುಡೆ ರಹಸ್ಯ ಪ್ರಕರಣಕ್ಕೆ ಕನ್ಯಾಡಿಯಲ್ಲಿ ನಡೆದ ಶೋಧ ಕಾರ್ಯ ಅಂತ್ಯಗೊಂಡಿದ್ದು ಅನಾಮಿಕ ಬರಿಗೈಯಲ್ಲಿ ವಾಪಸ್‌ ಆಗಿದ್ದಾನೆ. ಇಲ್ಲಿಯವರೆಗೆ ನೇತ್ರಾವತಿ ನದಿ ನಟ, ನದಿ ಪಕ್ಕ ಇರುವ ಅರಣ್ಯ, ಬಾಹುಬಲಿ ಬೆಟ್ಟದಲ್ಲಿ ಶೋಧ ಕಾರ್ಯ ನಡೆದಿತ್ತು. ಆದರೆ ಇಂದು ಧರ್ಮಸ್ಥಳದಿಂದ 5 ಕಿ.ಮೀ ದೂರದಲ್ಲಿರುವ ಕನ್ಯಾಡಿಯಲ್ಲಿ ಶೋಧ ನಡೆಸಲಾಯಿತು. ಕನ್ಯಾಡಿಯ ಖಾಸಗಿ ತೋಟದ ಪಕ್ಕದ ಅರಣ್ಯ (Forest) ಭಾಗದಲ್ಲಿ ಅನಾಮಿಕ ಶವ ಹೂತಿದ್ದೇನೆ ಎಂದು ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ಎ.ಸಿ ಸ್ಟೆಲ್ಲಾ ವರ್ಗೀಸ್ ಸಮ್ಮುಖದಲ್ಲಿ ಹಿಟಾಚಿ ಮೂಲಕ 6 ಅಡಿಯಷ್ಟು ಆಳಕ್ಕೆ ಅಗೆಯಲಾಯಿತು. ಮಳೆಯ ನಡುವೆಯೂ ಎಸ್‌ಐಟಿ ತಂಡ ಅನಾಮಿಕ ಹೇಳಿದಂತೆ ಗುಂಡಿ ತೋಡಿತು. ಯಾವುದೇ ಕುರುಹು ಪತ್ತೆಯಾಗದ ಕಾರಣ ಸಂಜೆ ಉತ್ಕನನ ಕೆಲಸವನ್ನು ಸ್ಥಗಿತಗೊಳಿಸಿ ಎಸ್‌ಐಟಿ ಅಧಿಕಾರಿಗಳು ವಾಪಸ್‌ ಆಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!