ಉದಯವಾಹಿನಿ, ಔರೈಯಾ: ರಕ್ಷಾ ಬಂಧನವು ಸಹೋದರ-ಸಹೋದರಿಯರ ನಡುವಿನ ಬಾಂಧವ್ಯವನ್ನು ಸಾರುವ ಹಬ್ಬವಾಗಿದೆ. ಆದರೆ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ನಡೆದ ಘಟನೆಯೊಂದು ಹಲವರನ್ನು ಬೆಚ್ಚಿಬೀಳಿಸಿದೆ. ವ್ಯಕ್ತಿಯೊಬ್ಬ ತನ್ನ ಚಿಕ್ಕಪ್ಪನ ಮಗಳು ರಾಖಿ (Rakhi) ಕಟ್ಟಿದ ದಿನವೇ ಆಕೆಯ ಮೇಲೆ ಅತ್ಯಾಚಾರಗೈದು ಕೊಲೆ (Murder Case) ಮಾಡಿದ್ದಾನೆ. ಮದ್ಯದ ಅಮಲಿನಲ್ಲಿದ್ದ ಆ ವ್ಯಕ್ತಿ ಬಾಲಕಿ ನಿದ್ದೆ ಮಾಡುತ್ತಿದ್ದಾಗ ಅವಳ ಮೇಲೆ ಹಲ್ಲೆ ನಡೆಸಿ, ಅತ್ಯಾಚಾರಗೈದು ನಂತರ ಕತ್ತು ಹಿಸುಕಿ ಕೊಂದಿದ್ದಾನೆ. ಈ ಸಂಬಂಧ 33 ವರ್ಷದ ಆರೋಪಿಯನ್ನು ಬಂಧಿಸಲಾಗಿದೆ.
ಹತ್ತು ವರ್ಷಗಳ ಹಿಂದೆ ಆರೋಪಿಯು ಸಂತ್ರಸ್ತೆಯ ತಾಯಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಈ ವಿಚಾರ ಕುಟುಂಬಸ್ಥರಿಗೆ ತಿಳಿದು ಜಗಳವಾಗಿತ್ತು. ಕುಟುಂಬವು ಇಬ್ಬರಿಗೂ ಬುದ್ದಿ ಹೇಳಿತ್ತು. ಸುಮಾರು ಎಂಟು ವರ್ಷಗಳ ಹಿಂದೆ, ಕುಟುಂಬವು ಆರೋಪಿಯನ್ನು ಇಟಾವಾದ ಮಹಿಳೆಯೊಂದಿಗೆ ಮದುವೆ ಮಾಡಲು ನಿರ್ಧರಿಸಿತು. ಇದು ಅವನ ಮತ್ತು ಚಿಕ್ಕಮ್ಮನ ನಡುವೆ ಹೆಚ್ಚಿನ ಅಂತರವನ್ನು ಉಂಟುಮಾಡಿತು.
ತನ್ನ ಚಿಕ್ಕಪ್ಪ ಉಸಿರಾಟದ ಕಾಯಿಲೆಯಿಂದ ಬಳಲುತ್ತಿದ್ದಾರೆ. 2015 ರಲ್ಲಿ, ತನಗೆ 23 ವರ್ಷ ವಯಸ್ಸಾಗಿದ್ದಾಗ ನಡೆದ ಘಟನೆಗಳನ್ನು ನೆನಪಿಸಿಕೊಳ್ಳುತ್ತಾ, ತನ್ನ ಚಿಕ್ಕಮ್ಮ ಒಮ್ಮೆ ತನ್ನನ್ನು ಕೆಲಸಕ್ಕೆಂದು ಮನೆಗೆ ಕರೆದಿದ್ದರು. ಆ ಸಮಯದಲ್ಲಿ, ಆರೋಪಿ ಮತ್ತು ಅವನ ಚಿಕ್ಕಮ್ಮ ದೈಹಿಕ ಸಂಬಂಧವನ್ನು ಬೆಳೆಸಿದರು. ಎರಡು ವರ್ಷಗಳ ಪರಸ್ಪರ ಸಂಪರ್ಕದಲ್ಲಿದ್ದಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.
