
ಉದಯವಾಹಿನಿ, ಕನ್ನಡ ಚಿತ್ರರಂಗದ ಪ್ರಮುಖ ನಟ ಕಿಚ್ಚ ಸುದೀಪ್ ತಮ್ಮ ಸಿನಿ ಬದುಕಿನ 30 ವರ್ಷಗಳನ್ನು ಪೂರೈಸಿರುವ ಸಂದರ್ಭದಲ್ಲಿ ಭಾವುಕ ಸಂದೇಶ ಹಂಚಿಕೊಂಡಿದ್ದಾರೆ. ಸುದೀಪ್, ತಮ್ಮ ಮೂರು ದಶಕಗಳ ಯಶಸ್ವಿ ಪಯಣದಲ್ಲಿ ಕೈಜೋಡಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.
ನಟನಾಗಿ ಕ್ಯಾಮೆರಾ ಎದುರು ನಿಂತ ಮೊದಲ ದಿನವನ್ನು ತಮ್ಮ ಸಿನಿ ಬದುಕಿನ ಆರಂಭವೆಂದು ಪರಿಗಣಿಸಿರುವ ಸುದೀಪ್, ಜನವರಿ 31ಕ್ಕೆ 30 ವರ್ಷ ಪೂರೈಸಿದ್ದಾರೆ. ಆರಂಭದ ದಿನಗಳ ಕನಸುಗಳು, ಅನುಮಾನಗಳು ಮತ್ತು ಭರವಸೆಗಳನ್ನೂ ನೆನಪಿಸಿಕೊಂಡ ಅವರು, ಇಂದು ತಾವು ತಲುಪಿರುವ ಹಂತಕ್ಕೆ ಕಾರಣವಾದುದು ಪ್ರೇಕ್ಷಕರು ಮತ್ತು ಚಿತ್ರರಂಗ ಎಂದು ಹೇಳಿದ್ದಾರೆ.
