ಉದಯವಾಹಿನಿ, ಮುಂಬೈ: ಅಕ್ರಮವಾಗಿ ಬಾರತದಲ್ಲಿ ವಾಸವಾಗಿದ್ದ ಆರೋಪ ಎದುರಿಸುತ್ತಿದ್ದ ಬಾಂಗ್ಲಾದ ಗರ್ಭಿಣಿಯೊಬ್ಬಳು ಮುಂಬೈನ ಜೆಜೆ ಆಸ್ಪತ್ರೆಯಿಂದ ಪರಾರಿಯಾದ ಪ್ರಕರಣ ನಡೆದಿದೆ. ರುಬಿನಾ ಇರ್ಷಾದ್ ಶೇಖ್ (25) ಪರಾರಿಯಾದ ಬಾಂಗ್ಲಾ ಮಹಿಳೆಯಾಗಿದ್ದಾಳೆ.
ಆಕೆಯನ್ನು ಬಂಧಿಸಿ ಬೈಕುಲ್ಲಾ ಮಹಿಳಾ ಜೈಲಿನಲ್ಲಿ ಇರಿಸಲಾಗಿತ್ತು. ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆ, ಪೊಲೀಸರು ಆಗಸ್ಟ್ 11 ರಂದು ಜೆಜೆ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಂದ ಆಕೆ ಪರಾರಿಯಾಗಿದ್ದಾಳೆ. ಆಕೆ ನವಿ-ಮುಂಬೈ ನಿವಾಸಿಯಾಗಿದ್ದಳು ಎಂದು ತಿಳಿದುಬಂದಿದೆ. ಆಕೆ ನಕಲಿ ಜನನ ಪ್ರಮಾಣಪತ್ರವನ್ನು ಬಳಸಿಕೊಂಡು ಭಾರತೀಯ ಪಾಸ್‌ಪೋರ್ಟ್ ಪಡೆಯಲು ಪ್ರಯತ್ನಿಸಿದ್ದಳು ಎಂದು ಆರೋಪಿಸಲಾಗಿದೆ. ರುಬಿನಾಳನ್ನು ಆ.14 ರಂದು ಕಾವಲಿಗಿದ್ದ ಪೊಲೀಸರನ್ನು ತಳ್ಳಿ, ಜನನಿಬಿಡ ಆಸ್ಪತ್ರೆ ಆವರಣದಿಂದ ಪರಾರಿಯಾಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ರುಬಿನಾ ಶೇಖ್ ವಿರುದ್ಧ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 262ರ (ಕಾನೂನುಬದ್ಧ ಬಂಧನಕ್ಕೆ ಪ್ರತಿರೋಧ ಅಥವಾ ಅಡಚಣೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!