ಉದಯವಾಹಿನಿ, ಬೆಂಗಳೂರು: ಮಾಜಿ ಐಎಎಸ್ ಅಧಿಕಾರಿ, ತಮಿಳುನಾಡಿನ ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್ ಮಾಸ್ಕ್‌ಮ್ಯಾನ್‌ಗೆ ಬುರುಡೆ ಕೊಟ್ಟು ಕಳುಹಿಸಿದ್ದಾರೆ ಎಂದು ಮಾಜಿ ಸಚಿವ, ಹಾಲಿ ಶಾಸಕ ಜನಾರ್ದನ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. ಕಳೆದ 15-20 ದಿನದಿಂದ ಧರ್ಮಸ್ಥಳದ ವಿಚಾರದಲ್ಲಿ ಸಾಕಷ್ಟು ಅಪಪ್ರಚಾರ ನಡೆಯುತ್ತಿದೆ. ಬಳ್ಳಾರಿ ಮೂಲದ ಅನ್ಯಮತಿಯ ಯುಟ್ಯೂಬರ್ ಒಬ್ಬ ಸೌಜನ್ಯ ಪ್ರಕರಣದ ಬಗ್ಗೆ ಮಾತನಾಡಿದ ವಿಡಿಯೋಗೆ ಮಿಲಿಯನ್ಸ್ ವ್ಯೂವ್ಸ್ ಬಂತು. ಆಗ ಎಡ ಪಂತಿಯ ಮೂವರು ಸೇರಿಕೊಂಡು ಇದನ್ನ ದೊಡ್ಡ ಮಟ್ಟಕ್ಕೆ ಕೊಂಡೊಯ್ಯಲು ಮುಂದಾದರು ಎಂದು ಹೇಳಿದರು.
ಕರ್ನಾಟಕ, ಭಾರತ ಅಷ್ಟೇ ಅಲ್ಲ ಈ ಜಗತ್ತಿನಲ್ಲಿ ಕೋಟ್ಯಂತರ ಜನ ನಂಬುವ ಸತ್ಯ ದೇವರು ಧರ್ಮಸ್ಥಳ. ಇಂತಹ ಧರ್ಮಸ್ಥಳದ ಬಗ್ಗೆ ಎಡಪಂತಿಯರು ಸಸಿಕಾಂತ್ ಸೆಂಥಿಲ್ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ತಂದಿದ್ದಾರೆ. ಹೈಕಮಾಂಡ್ ಸರ್ಕಾರಕ್ಕೆ ಒತ್ತಡ ಹಾಕಿದ್ದರಿಂದ ವಿಶೇಷ ತನಿಖಾ ತಂಡ ರಚನೆಯಾಗಿದೆ. ಧರ್ಮಸ್ಥಳ ಬುರುಡೆ ರಹಸ್ಯದ ಮಾಸ್ಟರ್ ಮೈಂಡ್ ಸೆಂಥಿಲ್ ಎಂದಿದ್ದಾರೆ.
ಹೈಕಮಾಂಡ್ ಸೂಚನೆಯಿಂದ ಕಾಂಗ್ರೆಸ್ ಸರ್ಕಾರ ಈಗ ಟ್ರ್ಯಾಪ್‌ನಲ್ಲಿ ಸಿಲುಕಿದೆ. ಅಭಿಮನ್ಯು ಚಕ್ರವ್ಯೂಹದಲ್ಲಿ ಸಿಲುಕಿದಂತೆ ಎಸ್‌ಐಟಿ ತನಿಖೆ ಮೂಲಕ ಚಕ್ರವ್ಯೂಹದಲ್ಲಿ ಸಿಲುಕಿದೆ. ಷಡ್ಯಂತ್ರ ನಡೆದಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರೇ ಹೇಳಿದ್ದಾರೆ. ಧರ್ಮಸ್ಥಳದ ವಿರುದ್ಧ ವ್ಯವಸ್ಥಿತವಾದ ಈ ಅಪಪ್ರಚಾರ ನಡೆದಿದೆ ಎಂದು ಹೇಳಿದರು.ಈ ಪ್ರಕರಣ ಸಿಬಿಐ, ಎನ್‌ಐಎ ತನಿಖೆ ನಡೆಸಬೇಕು. ಇಲ್ಲದೇ ಇದ್ದರೆ ಹೈಕೋರ್ಟ್ ಅಥವಾ ಸುಪ್ರಿಂ ಕೋರ್ಟ್ ಜಡ್ಜ್ ಮೂಲಕ ತನಿಖೆ ಆಗಬೇಕು. ಸರ್ಕಾರ ನಿರ್ಧಾರ ಮಾಡದೇ ಇದ್ದರೆ ನಾನೇ ಇದರ ವಿರುದ್ದ ಕೋರ್ಟ್ ಗೆ ಹೋಗಲು ನಿರ್ಧರಿಸಿದ್ದೇನೆ ಎಂದರು.
