ಉದಯವಾಹಿನಿ, ಬೆಂಗಳೂರು: ಮತಗಳ್ಳತನ ವಿಚಾರ ವಿಧಾನ ಪರಿಷತ್‌ನಲ್ಲೂ ಪ್ರತಿಧ್ವನಿಸಿತು. ಕಾಂಗ್ರೆಸ್ ಸದಸ್ಯ ಬಿ.ಕೆ ಹರಿಪ್ರಸಾದ್ ವಿಧಾನ ಪರಿಷತ್ ಕಲಾಪದ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪ ಮಾಡಿದರು. ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್‌ನ (ಇವಿಎಂ) ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ಮತಕಳವು ಮಾಡಲಾಗುತ್ತಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದ್ದು. ಪಾರದರ್ಶಕ ಚುನಾವಣಾ ವ್ಯವಸ್ಥೆ ಜಾರಿಗೆ ತರುವ ಮೂಲಕ ಈ ಅಕ್ರಮವನ್ನು ತಡೆಗಟ್ಟಬೇಕು. ಹೀಗೆಂದು ವೋಟ್ ಫಾರ್ ಡೆಮಾಕ್ರಸಿ ಸಂಸ್ಥೆಯ ಸದಸ್ಯರೊಂದಿಗೆ ಎದ್ದೇಳು ಕರ್ನಾಟಕ ಸಂಘಟನೆ ಆಯೋಜಿಸಿದ್ದ ದುಂಡುಮೇಜಿನ ಸಂವಾದದಲ್ಲಿ ಮೂಡಿಬಂದ ಅಭಿಪ್ರಾಯ. 2024ರಲ್ಲಿ ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣಾ ನಡೆದಾಗ ಸಂಜೆ 5 ಗಂಟೆಗೆ 58.22% ರಷ್ಟು ಮತದಾನವಾಗಿತ್ತು. ಆದರೆ 66.05% ರಷ್ಟು ಮತದಾನವಾಗಿದೆ ಎಂದು ಮಧ್ಯರಾತ್ರಿ ಘೋಷಿಸಲಾಯಿತು. ಹೆಚ್ಚುವರಿಯಾಗಿ 48 ಲಕ್ಷ ಮತಗಳು ಎಲ್ಲಿಂದ ಸೇರ್ಪಡೆಯಾದವು ಎನ್ನುವುದು ಸಂವಾದದಲ್ಲಿ ಕಂಡುಬಂದ ಪ್ರಶ್ನೆಯಾಗಿರುತ್ತದೆ ಎಂದು ವಿವರಿಸಿದ್ದಾರೆ.
ಅಲ್ಲಿ ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿಗಳು 3 ಸಾವಿರದ ಮತಗಳ ಅಂತರದಿಂದ 25 ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ. 5 ಸಾವಿರ ಮತಗಳ ಅಂತರದಿಂದ 39 ಕ್ಷೇತ್ರಗಳಲ್ಲಿ 10 ಸಾವಿರ ಮತಗಳ ಅಂತರದಿಂದ 69 ಕ್ಷೇತ್ರಗಳಲ್ಲಿ ರಾತ್ರೋರಾತ್ರಿ ಗೆಲವು ಪಡೆದಿರುವುದನ್ನು ಪ್ರತಿಪಾದಿಸಿರುತ್ತಾರೆ. ಲೋಕಸಭೆ ಚುನಾವಣೆಗೆ ಹೋಲಿಸಿದರೆ, ವಿಧಾನಸಭೆ ಚುನಾವಣೆ ಸಂದರ್ಭದಲ್ಲಿನ ಮತದಾರರ ಸಂಖ್ಯೆ ಹೆಚ್ಚಳದ ಬಗ್ಗೆ ಚುನಾವಣಾಧಿಕಾರಿಗಳು ಉತ್ತರಿಸಿಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!