ಉದಯವಾಹಿನಿ, ವೊಲ್ವರ್‌ಹ್ಯಾಂಪ್ಟನ್: ಇಬ್ಬರು ವೃದ್ಧ ಸಿಖ್ ವ್ಯಕ್ತಿಗಳ (Sikh men) ಮೇಲೆ ಯುಕೆಯ (United Kingdom) ವೊಲ್ವರ್‌ಹ್ಯಾಂಪ್ಟನ್‌ನಲ್ಲಿ ಹಲ್ಲೆ (Assault) ನಡೆಸಲಾಗಿದೆ. ಬಲವಂತವಾಗಿ ಸಿಖ್ ವ್ಯಕ್ತಿಯೊಬ್ಬನ ಪೇಟವನ್ನು ತೆಗೆಯಲಾಗಿದೆ. ಈ ಘಟನೆ ಆಗಸ್ಟ್ 15 ರಂದು ನಡೆದಿದೆ ಎನ್ನಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ. ಇದರ ವಿಡಿಯೊವನ್ನು ಸಾಮಾಜಿಕ ಮಾಧ್ಯಮವಾದ ಎಕ್ಸ್ ನಲ್ಲಿ (x) ಶಿರೋಮಣಿ ಅಕಾಲಿ ದಳದ ಅಧ್ಯಕ್ಷ (Shiromani Akali Dal President) ಸುಖ್‌ಬೀರ್ ಸಿಂಗ್ ಬಾದಲ್ (Sukhbir Singh Badal) ಎಂಬವರು ಹಂಚಿಕೊಂಡಿದ್ದು, ಭಾರಿ ವೈರಲ್ ಆಗಿದೆ.
ಯುಕೆಯ ವೊಲ್ವರ್‌ಹ್ಯಾಂಪ್ಟನ್‌ನಲ್ಲಿ ಇಬ್ಬರು ವೃದ್ಧ ಸಿಖ್ ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಒಬ್ಬ ಸಿಖ್ ವ್ಯಕ್ತಿಯ ಪೇಟವನ್ನು ಬಲವಂತವಾಗಿ ತೆಗೆಸಲಾಗಿದೆ. ಈ ಕುರಿತು ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ ಅವರು ವಿಡಿಯೊವನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಸಂಬಂಧಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಈ ವಿಡಿಯೊದಲ್ಲಿ ಒಬ್ಬ ವ್ಯಕ್ತಿಯು ವೃದ್ಧ ಸಿಖ್‌ರಲ್ಲಿ ಒಬ್ಬನನ್ನು ಒದ್ದು ಹೊಡೆಯುವುದನ್ನು ಕಾಣಬಹುದು. ದಾರಿಹೋಕನೊಬ್ಬ ಅವರನ್ನು ತಡೆಯಲು ಪ್ರಯತ್ನಿಸಿರುವುದು ಕೂಡ ವಿಡಿಯೊದಲ್ಲಿ ಸೆರೆಯಾಗಿದೆ. ಇನ್ನೊಬ್ಬ ಸಿಖ್ ವ್ಯಕ್ತಿ ಗಾಯಗೊಂಡ ಸ್ಥಿತಿಯಲ್ಲಿರುವುದು ಕೂಡ ಇದರಲ್ಲಿ ಕಾಣಬಹುದು. ಯುಕೆಯ ವೊಲ್ವರ್‌ಹ್ಯಾಂಪ್ಟನ್‌ನಲ್ಲಿ ಈ ಘಟನೆ ನಡೆದಿದೆ. ಇದು ಜನಾಂಗೀಯ ದ್ವೇಷ. ಇದರಲ್ಲಿ ಸಿಖ್ ಸಮುದಾಯವನ್ನು ಗುರಿಯಾಗಿಸಿಕೊಳ್ಳಲಾಗಿದೆ. ಎಂದು ಸುಖ್‌ಬೀರ್ ಸಿಂಗ್ ಬಾದಲ್ ತಿಳಿಸಿದ್ದಾರೆ.
