
ಉದಯವಾಹಿನಿ, ವಾಷಿಂಗ್ಟನ್: ಇಬ್ಬರು ಫುಡ್ ವ್ಲಾಗರ್‌ಗಳು (Food Influencers) ರೆಸ್ಟೋರೆಂಟ್‍ವೊಂದರಲ್ಲಿ ಆಹಾರ ಸೇವಿಸುತ್ತಿರುವಾಗ ಜೀವಕ್ಕೆ ಕುತ್ತು ಉಂಟಾಗಿರುವ ಘಟನೆ ನಡೆದಿದೆ. ಆಹಾರ ಸವಿಯುತ್ತ ಎಷ್ಟು ಚೆನ್ನಾಗಿದೆ ಎಂದು ತಿಳಿಸಬೇಕು ಅನ್ನೋವಷ್ಟರಲ್ಲಿ ವೇಗವಾಗಿ ಬಂದ ಎಸ್‍ಯುವಿ ಕಾರೊಂದು ರೆಸ್ಟೋರೆಂಟ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ವ್ಲಾಗರ್‌ಗಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಇಬ್ಬರಿಗೂ ಸಣ್ಣ-ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ (Viral Video) ಆಗಿದೆ. ಹೂಸ್ಟನ್ ಮೂಲದ ಫುಡ್ ವ್ಲಾಗರ್ಸ್ ನೀನಾ ಸ್ಯಾಂಟಿಯಾಗೊ ಮತ್ತು ಪ್ಯಾಟ್ರಿಕ್ ಬ್ಲಾಕ್‌ವುಡ್ ಫುಡ್ ವ್ಲಾಗ್ ಚಿತ್ರೀಕರಿಸುತ್ತಿದ್ದಾಗ, ವೇಗವಾಗಿ ಬಂದ ಕಾರು ಅವರು ಕುಳಿತಿದ್ದ ರೆಸ್ಟೋರೆಂಟ್‌ನ ಮುಂಭಾಗದ ಗೋಡೆಯ ಮೂಲಕ ನುಗ್ಗಿದೆ. ಆಗಸ್ಟ್ 17ರಂದು ಬ್ಲ್ಯಾಕ್‌ವುಡ್ ಮತ್ತು ಸ್ಯಾಂಟಿಯಾಗೊ ಆಹಾರ ಹೇಗಿದೆ ಎಂಬ ಬಗ್ಗೆ ವಿಮರ್ಶಿಸಲು ರೆಸ್ಟೋರೆಂಟ್‌ಗೆ ತೆರಳಿದ್ದರು. ಅವರು ಆಹಾರ ತಿನ್ನುತ್ತಿರಬೇಕಾದರೆ, ಕಾರು ರೆಸ್ಟೋರೆಂಟ್‌ನ ಮುಂಭಾಗಕ್ಕೆ ಗುದ್ದಿದೆ. ಅದು ಗಾಜಿನಿಂದ ಮಾಡಲ್ಪಟ್ಟಿದ್ದರಿಂದ ಡಿಕ್ಕಿ ಹೊಡೆದ ರಭಸಕ್ಕೆ ಚೂರು ಚೂರಾಗಿ ಬಿದ್ದಿದೆ.
