ಉದಯವಾಹಿನಿ, ನವದೆಹಲಿ: ರೈಲಿನ ಶೌಚಾಲಯದಲ್ಲಿ ವ್ಯಕ್ತಿಯೊಬ್ಬ ಹೊರಗೆ ಬಂದು ಸೆಕೆಂಡುಗಳ ನಂತರ ಯುವತಿ ಹೊರಬರುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಶೌಚಾಲಯದೊಳಗಿನಿಂದ ಯುವಕ ಹೊರಬಂದ ನಂತರ ಯುವತಿ ಹೊರಬಂದಿದ್ದಾಳೆ. ಈ ವಿಡಿಯೊ ಇದೀಗ ಭಾರಿ ಆಕ್ರೋಶ ಹಾಗೂ ಹಾಸ್ಯವನ್ನು ಹುಟ್ಟುಹಾಕಿದೆ. ಆದರೆ, ಈ ವಿಡಿಯೊದ ಸತ್ಯಾಸತ್ಯತೆಯನ್ನು ದೃಢೀಕರಿಸಲಾಗಿಲ್ಲ.

ವಿಡಿಯೊದ ನಿಖರವಾದ ಸ್ಥಳ, ದಿನಾಂಕ ಮತ್ತು ಸಮಯ ಇನ್ನೂ ಖಚಿತವಾಗಿಲ್ಲ. ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೊ ಭಾರಿ ವೈರಲ್ ಆಗಿದೆ. ವಿಡಿಯೊದಲ್ಲಿ ಮಾಸ್ಕ್ ಧರಿಸಿದ ವ್ಯಕ್ತಿಯೊಬ್ಬ ಶೌಚಾಲಯದಿಂದ ಹೊರಬಂದಿದ್ದಾನೆ. ನಂತರ ಬಾಗಿಲು ಮುಚ್ಚುತ್ತದೆ. ಕೆಲವೇ ಸೆಕೆಂಡುಗಳಲ್ಲಿ ಯುವಕ ಹೊರಬಂದ ಶೌಚಾಲಯದಿಂದ ಯುವತಿ ಹೊರಬಂದಿದ್ದಾಳೆ. ಯುವತಿಯು ಕೋಚ್‍ನ ಶೌಚಾಲಯದ ಬಾಗಿಲಿನಂದ ಹೊರಬರುತ್ತಿರುವಲ್ಲಿಗೆ ವಿಡಿಯೊ ಮುಗಿಯುತ್ತದೆ. ಪ್ರಯಾಣಿಕರೊಬ್ಬರು ರಹಸ್ಯವಾಗಿ ಈ ದೃಶ್ಯವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!