ಉದಯವಾಹಿನಿ, ಲಖನೌ: ವಿವಾಹೇತರ ಸಂಬಂಧ ಶಂಕೆಯ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಪತ್ನಿಯನ್ನು ಕೊಂದು ಶವವನ್ನು ಸ್ಮಶಾನದಲ್ಲಿ ಹೂತು ಹಾಕಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ ಅಮ್ರೋಹಾದ ವರ್ಣಚಿತ್ರಕಾರ ಈ ದುಷ್ಕೃತ್ಯವನ್ನು ಎಸಗಿದ್ದು, ಆತನನ್ನು ಇಬ್ಬರು ಸಹಚರರೊಂದಿಗೆ ಬಂಧಿಸಲಾಗಿದೆ ಈ ಆಗಸ್ಟ್ 1ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಯು ತನಿಖೆಯ ದಾರಿ ತಪ್ಪಿಸಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದಾನೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 1ರಂದು ಸಾವನ್ನಪ್ಪಿದ ಫಾತಿಮಾ ಸಾಯುವ ಮೊದಲು ಹಲವು ದಿನಗಳ ಕಾಲ ಆಕೆಯ ಪತಿ ಆಕೆಗೆ ಕೀಟ ನಾಶಕ ಮತ್ತು ನಿದ್ರಾಜನಕಗಳನ್ನು ಸೇವಿಸುವಂತೆ ಆಗ್ರಹಿಸಿದ್ದಾನೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಪತಿ 47 ವರ್ಷದ ಶಾದಾಬ್ ಅಲಿಯನ್ನು ಪೊಲೀಸರು ಬಂಧಿಸಿದ್ದಾರೆ. ಪತ್ನಿಯನ್ನು ಕೊಂದ ಬಳಿಕ ಶಾದಾಬ್ ಅಲಿ ತನ್ನ ಸಹಚರರ ಸಹಾಯದಿಂದ ಮೆಹ್ರೌಲಿ ಸ್ಮಶಾನದಲ್ಲಿ ಆಕೆಯ ಶವವನ್ನು ಹೂಳಿದ್ದಾನೆ ಎಂದು ದೆಹಲಿ ಪೊಲೀಸರು ಬುಧವಾರ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಅಮ್ರೋಹಾದ ವರ್ಣಚಿತ್ರಕಾರ ಶಾದಾಬ್ ಅಲಿ ಪತ್ನಿ ಫಾತಿಮಾಗೆ ಸಾಯುವ ಮೊದಲು ಹಲವು ದಿನಗಳ ಕಾಲ ಆಕೆಗೆ ಕೀಟ ನಾಶಕ ಮತ್ತು ನಿದ್ರಾಜನಕಗಳನ್ನು ಸೇವಿಸುವಂತೆ ಆಗ್ರಹಿಸಿದ್ದಾನೆ. ಆಕೆ ಸತ್ತ ಬಳಿಕ ಸ್ನೇಹಿತರಾದ ಶಾರುಖ್ ಖಾನ್ ಮತ್ತು ತನ್ವೀರ್ ಸಹಾಯದಿಂದ ಮೃತದೇಹವನ್ನು ಕಾರಿನಲ್ಲಿ ಸಾಗಿಸಿ ರಹಸ್ಯವಾಗಿ ಸ್ಮಶಾನದಲ್ಲಿ ಹೂಳಿದ್ದಾನೆ ಎನ್ನಲಾಗಿದೆ.ಫಾತಿಮಾಳ ಬಟ್ಟೆಗಳನ್ನು ಕಾಲುವೆಯಲ್ಲಿ ಬಿಸಾಡಿ ಆಕೆ ಬೇರೆಯವರೊಂದಿಗೆ ಓಡಿ ಹೋಗಿದ್ದಾಳೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಾನೆ. ಈ ಮೂಲಕ ತನಿಖೆಯ ದಾರಿ ತಪ್ಪಿಸಲು ಪ್ರಯತ್ನಿಸಿದ್ದಾನೆ ಎಂದು ಉಪ ಪೊಲೀಸ್ ಆಯುಕ್ತ (ದಕ್ಷಿಣ) ಅಂಕಿತ್ ಚೌಹಾಣ್ ತಿಳಿಸಿದ್ದಾರೆ.
ಘಟನೆಯ ಬಳಿಕ ಆತ ಅಮ್ರೋಹಾಗೆ ಪರಾರಿಯಾಗಿದ್ದ. ಫಾತಿಮಾಳ ಸ್ನೇಹಿತರೊಬ್ಬರು ಆಗಸ್ಟ್ 10ರಂದು ಮೆಹ್ರೌಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಬಳಿಕ ಆಕೆಗಾಗಿ ಹುಡುಕಾಟ ಪ್ರಾರಂಭಿಸಲಾಗಿದೆ.
ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದು, ಫಾತಿಮಾ ತನ್ನ ಪತಿ ಮತ್ತು ಆತನ ಸಹಾಯಕರೊಂದಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಾಣಿಸಿಕೊಂಡಿರುವುದು ಪೊಲೀಸರ ಶಂಕೆಯನ್ನು ಹೆಚ್ಚಿಸಿದೆ. ಬಳಿಕ ಶಾದಾಬ್ ಅನ್ನು ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮೊದಲು ಆತ ಶವವನ್ನು ಕಾಲುವೆಯಲ್ಲಿ ಎಸೆದಿರುವುದಾಗಿ ಹೇಳಿಕೊಂಡಿದ್ದ. ಅನಂತರ ಪತ್ನಿಯ ವಿವಾಹೇತರ ಸಂಬಂಧದ ಕಾರಣ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
