ಉದಯವಾಹಿನಿ, ವಾಷಿಂಗ್ಟನ್: ಜಾಗತೀಕ ಮಾರುಕಟ್ಟೆಯ ಮೇಲೆ ನಿಯಂತ್ರಣ ಸಾಧಿಸಬೇಕಾದ್ರೆ, ಚೀನಾವನ್ನ ಎದುರಿಸಬೇಕಾದ್ರೆ ಭಾರತ ಮತ್ತು ಅಮೆರಿಕ ಸಂಬಂಧವನ್ನ ಹಳಿಗೆ ತನ್ನಿ ಎಂದು ವಿಶ್ವಸಂಸ್ಥೆಯ ಅಮೆರಿಕದ ಮಾಜಿ ರಾಯಭಾರಿ ನಿಕ್ಕಿ ಹ್ಯಾಲಿ ಟ್ರಂಪ್‌ಗೆ ಮತ್ತೆ ಎಚ್ಚರಿಕೆ ನೀಡಿದ್ದಾರೆ.
ರಷ್ಯಾದ ತೈಲ ಖರೀದಿಸುತ್ತಿರುವ ಭಾರತದ ಮೇಲೆ 50% ಸುಂಕ ವಿಧಿಸಿರುವ ಸಂಬಂಧ ʻನ್ಯೂಸ್ ವೀಕ್’ ನಲ್ಲಿ ಬರೆದ ತಮ್ಮ ಲೇಖನದಲ್ಲಿ ಈ ನಿಲುವನ್ನು ಪ್ರತಿಪಾದಿಸಿದ್ದಾರೆ. ಭಾರತವನ್ನು ಅಮೂಲ್ಯವಾದ ಮುಕ್ತ ಮತ್ತು ಪ್ರಜಾಪ್ರಭುತ್ವ ಪಾಲುದಾರನಂತೆ ಪರಿಗಣಿಸಬೇಕೇ ಹೊರತು ಚೀನಾದಂತೆ ಎದುರಾಳಿಯನ್ನಾಗಿ ಅಲ್ಲ ಎಂದು ಒತ್ತಿ ಹೇಳಿದ್ದಾರಲ್ಲದೇ ಭಾರತದ ಸಂಬಂಧ ಕಡಿತಗೊಳಿಸುವುದು ಕಡಿತಗೊಳಿಸುವುದು ಕಾರ್ಯತಂತ್ರದ ವಿಪತ್ತು ಎಂದು ಬಣ್ಣಿಸಿದ್ದಾರೆ.

ಚೀನಾ, ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಮುಂದುವರೆಸಿದ್ದರೂ ಈವರೆಗೆ ಯಾವುದೇ ಪ್ರಮುಖ ನಿರ್ಬಂಧಗಳನ್ನ ಎದುರಿಸುತ್ತಿಲ್ಲ. ಹೀಗಿರುವಾಗ ಭಾರತವನ್ನ ಶಿಕ್ಷಿಸುವುದು ಅಮೆರಿಕದ ಏಷ್ಯಾ ಕಾರ್ಯತಂತ್ರವನ್ನ ದುರ್ಬಲಗೊಳಿಸಬಹುದು. ಹಾಗಾಗಿ ಭಾರತ ಸಂಬಂಧವನ್ನು ಉಳಿಸಿಕೊಂಡರೆ, ಅಮೆರಿಕದ ಪೂರೈಕೆ ಸರಪಳಿಯನ್ನು ಚೀನಾದಿಂದ ಬೇರ್ಪಡಿಸಲು ಸಹಾಯವಾಗುತ್ತೆ. ಜವಳಿ, ಅಗ್ಗದ ಮೊಬೈಲ್ ಫೋನ್‌ಗಳು ಮತ್ತು ಸೌರ ಫಲಕಗಳ ದೊಡ್ಡ ಪ್ರಮಾಣದ ಉತ್ಪಾದನೆಯಲ್ಲಿ ಪ್ರಮುಖ ಪಾಲುದಾರನಾಗಬಹುದು ಎಂದು ಬರೆದಿದ್ದಾರೆ.

Leave a Reply

Your email address will not be published. Required fields are marked *

error: Content is protected !!