ಉದಯವಾಹಿನಿ, ಮಾಸ್ಕೋ: ಟ್ರಂಪ್ ಸುಂಕದ ಉದ್ವಿಗ್ನತೆ ನಡುವೆ ಭಾರತಕ್ಕೆ ತೈಲದ ಮೇಲೆ 5% ರಿಯಾಯಿತಿ ನೀಡಲಾಗುವುದು ಎಂದು ರಷ್ಯಾ ಘೋಷಿಸಿದೆ. ಭಾರತಕ್ಕೆ ರಷ್ಯಾದ ಉಪ ವ್ಯಾಪಾರ ಪ್ರತಿನಿಧಿ ಎವ್ಗೆನಿ ಗ್ರಿವಾ, ಭಾರತಕ್ಕೆ ರಷ್ಯಾದ ಕಚ್ಚಾ ತೈಲ ಖರೀದಿಯ ಮೇಲೆ ಮಾತುಕತೆಗೆ ಒಳಪಟ್ಟು ಶೇ.5 ರಷ್ಟು ರಿಯಾಯಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ರಾಜಕೀಯ ಪರಿಸ್ಥಿತಿಯ ಹೊರತಾಗಿಯೂ, ಭಾರತವು ಸರಿಸುಮಾರು ಅದೇ ಮಟ್ಟದ ತೈಲವನ್ನು ಆಮದು ಮಾಡಿಕೊಳ್ಳುತ್ತದೆ ಎಂದು ಗ್ರಿವಾ ತಿಳಿಸಿದ್ದಾರೆ. ರಿಯಾಯಿತಿಗಳಿಗೆ ಸಂಬಂಧಿಸಿದಂತೆ, ಇದು ವಾಣಿಜ್ಯ ರಹಸ್ಯವಾಗಿದೆ. ಏಕೆಂದರೆ ಇದು ಸಾಮಾನ್ಯವಾಗಿ ಉದ್ಯಮಿಗಳ ನಡುವಿನ ಸಂಭಾಷಣೆ ಎಂದು ಹೇಳಿದ್ದಾರೆ. ರಷ್ಯಾದ ಉಪ ಮುಖ್ಯಸ್ಥ ಮಿಷನ್ ರೋಮನ್ ಬಾಬುಷ್ಕಿನ್ ಮಾತನಾಡಿ, ಭಾರತಕ್ಕೆ ಇದು ಸವಾಲಿನ ಪರಿಸ್ಥಿತಿ. ಆದರೂ, ನಮಗೆ ನಮ್ಮ ಸಂಬಂಧಗಳಲ್ಲಿ ನಂಬಿಕೆ ಇದೆ. ಬಾಹ್ಯ ಒತ್ತಡದ ಹೊರತಾಗಿಯೂ ಭಾರತ-ರಷ್ಯಾ ಇಂಧನ ಸಹಕಾರ ಮುಂದುವರಿಯುತ್ತದೆ ಎಂದು ನಮಗೆ ವಿಶ್ವಾಸವಿದೆಯೆಂದು ಆಶಯ ವ್ಯಕ್ತಪಡಿಸಿದ್ದಾರೆ.
