ಉದಯವಾಹಿನಿ, ಚಿಕ್ಕಮಗಳೂರು: ಮಲೆನಾಡ ಗಾಂಧಿ ಎಂದೇ ಹೆಸರಾಗಿದ್ದ ಮಾಜಿ ಸಚಿವ ದಿ.ಹೆಚ್.ಜಿ. ಗೋವಿಂದೇಗೌಡರ ಮನೆಯಲ್ಲಿ 7 ಲಕ್ಷ ರೂ. ನಗದು ಹಾಗೂ ಚಿನ್ನಾಭರಣ (Gold) ಕಳವಾಗಿದೆ.
ನೇಪಾಳ ಮೂಲದ ಮನೆಗೆಲಸದವರಿಂದಲೇ ಕಳ್ಳತನ ನಡೆದಿದೆ. ಗೋವಿಂದೇಗೌಡರ ಪುತ್ರ ವೆಂಕಟೇಶ್ ವಾಸವಿರುವ ಕೊಪ್ಪ ತಾಲೂಕಿನ ಮಣಿಪುರ ಎಸ್ಟೇಟ್‍ನಲ್ಲಿ ಈ ಕಳ್ಳತನ ನಡೆದಿದೆ. ಈ ಮನೆಗೆ ಕಳೆದ 15 ದಿನಗಳ ಹಿಂದಷ್ಟೇ ನೇಪಾಳ ಮೂಲದ ದಂಪತಿ ಕೆಲಸಕ್ಕೆ ಸೇರಿದ್ದರು. ಕಳೆದ ರಾತ್ರಿ ಮನೆಯಲ್ಲಿ ಎಲ್ಲರೂ ನಿದ್ರೆಗೆ ಜಾರಿದ್ದಾಗ, ದಂಪತಿ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.ಚಿಕ್ಕಮಗಳೂರು: ಮಲೆನಾಡ ಗಾಂಧಿ ಎಂದೇ ಹೆಸರಾಗಿದ್ದ ಮಾಜಿ ಸಚಿವ ದಿ.ಹೆಚ್.ಜಿ. ಗೋವಿಂದೇಗೌಡರ ಮನೆಯಲ್ಲಿ 7 ಲಕ್ಷ ರೂ. ನಗದು ಹಾಗೂ ಚಿನ್ನಾಭರಣ (Gold) ಕಳವಾಗಿದೆ.ನೇಪಾಳ ಮೂಲದ ಮನೆಗೆಲಸದವರಿಂದಲೇ ಕಳ್ಳತನ ನಡೆದಿದೆ. ಗೋವಿಂದೇಗೌಡರ ಪುತ್ರ ವೆಂಕಟೇಶ್ ವಾಸವಿರುವ ಕೊಪ್ಪ (Koppa) ತಾಲೂಕಿನ ಮಣಿಪುರ ಎಸ್ಟೇಟ್‍ನಲ್ಲಿ ಈ ಕಳ್ಳತನ ನಡೆದಿದೆ. ಈ ಮನೆಗೆ ಕಳೆದ 15 ದಿನಗಳ ಹಿಂದಷ್ಟೇ ನೇಪಾಳ ಮೂಲದ ದಂಪತಿ ಕೆಲಸಕ್ಕೆ ಸೇರಿದ್ದರು. ಕಳೆದ ರಾತ್ರಿ ಮನೆಯಲ್ಲಿ ಎಲ್ಲರೂ ನಿದ್ರೆಗೆ ಜಾರಿದ್ದಾಗ, ದಂಪತಿ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.ಈ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.
