ಉದಯವಾಹಿನಿ, ಹಾವೇರಿ: ತಮ್ಮ ಪುತ್ರ ಕಾಂತೇಶ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಮಾಜಿ ಉಪಮುಖ್ಮಮಂತ್ರಿ ಕೆಎಲ್ ಈಶ್ವರಪ್ಪ ತಿಳಿಸಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಮಗ ಕಾಂತೇಶ್ ಬರುವ ಲೋಕಸಭೆ ಚುನಾವಣೆಯಲ್ಲಿ ಹಾವೇರಿಯಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದು ಸತ್ಯ. ಅದಕ್ಕೆ ಕೇಂದ್ರ ನಾಯಕರು ಯಾವ ತೀರ್ಮಾನ ಕೈಗೊಳ್ಳುತ್ತಾರೆ, ಅದರ ಮೇಲೆ ನಿರ್ಣಯ ಮಾಡುತ್ತೇವೆ. ಹಾವೇರಿ ಸಂಸದ ಶಿವಕುಮಾರ್ ಉದಾಸಿ ತಾವು ವೈಯಕ್ತಿಕ ಕಾರಣದಿಂದ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿರುವುದಾಗಿ ಹೇಳಿದರು.
ಇದೇ ವೇಳೆ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದ ಅವರು, ಕಾಂಗ್ರೆಸ್‌ನವರಿಗೆ ಹಿಂದು ಧರ್ಮದ ಬಗ್ಗೆ ದ್ವೇಷವಿದ್ದು ಮುಸ್ಲಿಂ ಲೀಗ್ ಗಿಂತ ಮುಸ್ಲಿಮರ ಪರವಾಗಿ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತೀರುವ ಪಕ್ಷ ಎಂದು ಆರೋಪಿಸಿದರು. ಕಾಂಗ್ರೆಸ್ ಹೇಳುವುದು ಜಾತ್ಯತೀತವಾದ ಮಾಡುವುದು ಹಿಂದೂ ವಿರೋಧಿ ನೀತಿ. ಬಲವಂತ ಮತಾಂತರ ನಿಷೇಧ ಮತ್ತು ಗೋಹತ್ಯೆ ನಿಷೇಧ ಮಾಡಿದ್ದೆವು. ಕಾಂಗ್ರೆಸ್ ಇದೀಗ ಅವುಗಳನ್ನ ವಾಪಸ್ ರದ್ದುಪಡಿಸುತ್ತಿದೆ. ಮುಸ್ಲಿಮರನ್ನು ಸಂತೃಪ್ತಿ ಮಾಡಲು ಕಾಂಗ್ರೆಸ್ ಈ ರೀತಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
