ಉದಯವಾಹಿನಿ, ವಾಷಿಂಗ್ಟನ್‌: ರಷ್ಯಾ-ಉಕ್ರೇನ್‌ ಯುದ್ಧ ಕೊನೆಗೊಳಿಸಲು ಶತಪ್ರಯತ್ನ ನಡೆಸುತ್ತಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈಗ‌ ಇದ್ದಕ್ಕಿದ್ದಂತೆ ಯೂಟರ್ನ್‌ ಹೊಡೆದಿದ್ದಾರೆ. ಯುದ್ಧ ಕೊನೆಗೊಳಿಸುವ ಪ್ರಯತ್ನದಲ್ಲಿ ನೇರ ಹಸ್ತಕ್ಷೇಪದಿಂದ ಹಿಂದೆ ಸರಿಯಲು ಟ್ರಂಪ್‌ ನಿರ್ಧರಿಸಿದ್ದಾರೆ. ಅಮೆರಿಕದ ಮಧ್ಯಸ್ಥಿಕೆ ಇಲ್ಲದೇ ಪುಟಿನ್‌ – ಝಲೆನ್ಸ್ಕಿ ಮೊದಲು ಮುಖಾಮುಖಿ ಭೇಟಿಯಾಗಬೇಕು, ನೇರ ಮಾತುಕತೆ ನಡೆಸಬೇಕು ಎಂದು ಹೇಳಿದ್ದಾರೆ.

ಶ್ವೇತಭವನದ ಆಡಳಿತಾಧಿಕಾರಿಗಳು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ್ದಾರೆ. ಮುಂದಿನ ಹಂತದ ಶಾಂತಿ ಮಾತುಕತೆಗಳಲ್ಲಿ ಟ್ರಂಪ್‌ ನೇರವಾಗಿ ಭಾಗಿಯಾಗದಿರಲು ನಿರ್ಧರಿಸಿದ್ದಾರೆ. ಬದಲಾಗಿ ರಷ್ಯಾ ಅಧ್ಯಕ್ಷ ಪುಟಿನ್‌, ಉಕ್ರೇನ್‌ ಅಧ್ಯಕ್ಷ ಝಲೆನ್ಸ್ಕಿ ಮೊದಲು ಪರಸ್ಪರ ಭೇಟಿಯಾಗಬೇಕೆಂದು ಅವರು ಬಯಸಿದ್ದಾರೆ ಎಂದು ತಿಳಿಸಿದ್ದಾರೆ. ಟ್ರಂಪ್‌ ದೃಷ್ಟಿಕೋನದಲ್ಲಿ ಯುದ್ಧ ಕೊನೆಗೊಳಿಸುವ ಮುಂದಿನ ಹೆಜ್ಜೆ ಪುಟಿನ್‌, ಝಲೆನ್ಸ್ಕಿ ನಡುವಿನ ದ್ವಿಪಕ್ಷೀಯ ಸಭೆ. ಈ ಸಭೆ ನಿಜವಾಗ್ಲೂ ನಡೆಯುತ್ತದೆಯೋ, ಇಲ್ಲವೋ? ಅನ್ನೋದು ಖಚಿತವಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!