ಉದಯವಾಹಿನಿ, ಶಿವಮೊಗ್ಗ: ನೂತನ ಸೇತುವೆ ಉದ್ಘಾಟನೆಯಾದ ಬೆನ್ನಲ್ಲೇ ಬೆಂಗಳೂರಿನಿಂದ ಸಿಗಂದೂರಿಗೆ ಕೆಎಸ್‌ಆರ್‌ಟಿಸಿ ನಾನ್ ಎಸಿ ಬಸ್ ಸಂಚಾರ ಆರಂಭವಾಗಿದೆ. ಈ ಬಗ್ಗೆ ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಬೆಂಗಳೂರು ಮತ್ತು ಸಿಗಂದೂರು ನಡುವೆ ಹೊಸದಾಗಿ ನಾನ್ ಎಸಿ ಸ್ಲೀಪರ್ ಬಸ್ ಪ್ರಾರಂಭಿಸಿದೆ. ಆ. 22ರಿಂದ ಸಂಚಾರ ಆರಂಭಿಸಿದೆ. ಬೆಂಗಳೂರಿನಿಂದ ರಾತ್ರಿ 9:40ಕ್ಕೆ ಹೊರಟು ಚಿತ್ರದುರ್ಗ, ಹೊಳಲ್ಕೆರೆ, ಚನ್ನಗಿರಿ, ಮತ್ತು ಶಿವಮೊಗ್ಗ ತಲುಪಲಿದೆ. ಬಳಿಕ ಸಿಗಂದೂರನ್ನು ಬೆಳಗ್ಗೆ 6 ಗಂಟೆಗೆ ತಲುಪಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
