ಉದಯವಾಹಿನಿ, ಮಂಗಳೂರು: ರಾಜ್ಯವಷ್ಟೇ ಅಲ್ಲ ಇಡೀ ದೇಶದ ಕಣ್ಣು ಧರ್ಮಸ್ಥಳದತ್ತ ನೆಟ್ಟಿತ್ತು. ವಿದೇಶಿ ಮಾಧ್ಯಮಗಳಲ್ಲೂ ಧರ್ಮಸ್ಥಳ ಕ್ಷೇತ್ರದ ಸುದ್ದಿ ಬಿತ್ತರವಾಗಿತ್ತು. ಧರ್ಮಸ್ಥಳದ ನೇತ್ರಾವತಿ ನದಿ ತೀರ, ಅರಣ್ಯ ಪ್ರದೇಶದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ಕೈಯಲ್ಲಿ ಒಂದು ಬುರುಡೆ ಹಿಡ್ಕೊಂಡು ಪೊಲೀಸ್ ಠಾಣೆಗೆ ಬಂದ ಅಜಾನುಬಾಹು.. ಭೀಮ.. ಬುರುಡೆ ದಾಸ.. ಇದೀಗ ತಾನೇ ತೋಡಿದ ಗುಂಡಿಗೆ ಬಿದ್ದಿದ್ದಾನೆ. ಈ ಬುರುಡೆಯ ಹೆಣ ಹೂತಿದ್ದು ನಾನೇ.. ಧರ್ಮಸ್ಥಳದ ಸುತ್ತ ಮುತ್ತ ಇನ್ನೂ ನೂರಾರು ಹೆಣಗಳನ್ನು ಹೂತಿದ್ದೇನೆ ಅಂತ ಪೊಲೀಸರ ಮುಂದೆ ಸ್ಕ್ರೀನ್ ಪ್ಲೇ ಮಾಡಿದ್ದ. ನಾನು ಶವಗಳನ್ನು ಹೂತಿಟ್ಟ ಜಾಗ ನನಗೆ ಗೊತ್ತು. ತೋರಿಸ್ತೀನಿ ಅಂತ ಕಲರ್ ಕಲರ್ ಕತೆ ಕಟ್ಟಿದ್ದ. ಸುಳ್ಳನ್ನು ತಲೆ ಮೇಲೆ ಹೊಡ್ದಂತೆ ಇಲ್ಲೇ ಹೂತಿಟ್ಟಿದ್ದೀನಿ ಅಂತ ಸ್ಥಳಗಳನ್ನು ಗುರುತಿಸಿದ್ದ. ಈಗ ಬುರೆಡೆ ಚಿನ್ನಯ್ಯನ ಬಂಡವಾಳವನ್ನ ಎಸ್‌ಐಟಿ ಪೊಲೀಸರು ಹೊರಗೆಳೆದಿದ್ದಾರೆ. ತೀವ್ರ ವಿಚಾರಣೆ ಬಳಿಕ ಆತನನ್ನ ಬಂಧಿಸಿದ್ದಾರೆ.
