ಉದಯವಾಹಿನಿ, ಬ್ಯಾಂಕಾಕ್: ಥೈಲ್ಯಾಂಡ್‌ನ ಕೊ ಸಮುಯಿ ದ್ವೀಪದಲ್ಲಿರುವ ವಾಟ್ ಖುನಾರಾಮ್ ದೇವಾಲಯದಲ್ಲಿ ಧ್ಯಾನ ಮಾಡುತ್ತಾ ನಿಧನರಾದ ಸನ್ಯಾಸಿಯೊಬ್ಬರ ದೇಹವನ್ನು ಇನ್ನೂ ಸಂರಕ್ಷಿಸಿಡಲಾಗಿದೆ. 50 ವರ್ಷಗಳ ಹಿಂದೆ ಸನ್ಯಾಸಿ ಲುವಾಂಗ್ ಫೋ ಡೇಂಗ್ ತಮ್ಮ 79ನೇ ವಯಸ್ಸಿನಲ್ಲಿ ಧ್ಯಾನ ಮಾಡುತ್ತಿದ್ದಾಗ ನಿಧನರಾಗಿದ್ದಾರೆ. ಇವರ ದೇಹವನ್ನು ಗಾಜಿನೊಳಗೆ ಧ್ಯಾನ ಮಾಡುತ್ತಿರುವ ರೀತಿಯಲ್ಲೇ ಸಂರಕ್ಷಿಸಿಡಲಾಗಿದೆ.

ಲುವಾಂಗ್ ಫೋ ಡೇಂಗ್ ಅವರ ದೇಹವು 1973 ರಲ್ಲಿ ಪತ್ತೆಯಾಗಿದ್ದು, ಗಾಜಿನ ಕ್ಯಾಬಿನೆಟ್‌ನಲ್ಲಿ ಇರಿಸಲಾಗಿತ್ತು. ಇಂದಿಗೂ ಅವರ ದೇಹವು ಸಂರಕ್ಷಿಸಲ್ಪಟ್ಟಿದೆ. 2000ರ ದಶಕದ ಆರಂಭದಲ್ಲಿ ನಡೆಸಲಾದ ರೇಡಿಯೋಗ್ರಾಫಿಕ್ ಪರೀಕ್ಷೆಗಳು ಅವರ ಹೆಚ್ಚಿನ ಅಂಗ ವ್ಯವಸ್ಥೆಗಳು ಹಾಗೆಯೇ ಉಳಿದಿವೆ, ಆದರೆ ಕುಗ್ಗಿವೆ ಎಂದು ತೋರಿಸಿವೆ. ದಶಕಗಳ ನಂತರವೂ ಅವರ ಆಂತರಿಕ ಅಂಗಗಳು ಮತ್ತು ಮೆದುಳಿನ ಅಂಗಾಂಶಗಳು ಇನ್ನೂ ಹಾಗೆಯೇ ಉಳಿದಿವೆ ಎನ್ನಲಾಗಿದೆ.ಹಲ್ಲಿಗಳು ಮತ್ತು ಇತರ ಸಣ್ಣ ಸರೀಸೃಪಗಳು ಸನ್ಯಾಸಿಯ ಬಾಯಿ, ತಲೆಬುರುಡೆ ಮತ್ತು ಗಂಟಲು ಸೇರಿದಂತೆ ದೇಹದ ಇತರೆ ಅಂಗಗಳಲ್ಲಿ ವಾಸಿಸುತ್ತವೆ. ಒಣಗಿದ ಚರ್ಮದ ಕೆಳಗೆ ಮೊಟ್ಟೆಗಳನ್ನು ಇಡುತ್ತವೆ. ದೇವಾಲಯಕ್ಕೆ ಭೇಟಿ ನೀಡುವವರಿಗೆ, ವಿಶೇಷವಾಗಿ ಮಕ್ಕಳಿಗೆ, ಭಯಾನಕ ವಾತಾವರಣವನ್ನು ಕಡಿಮೆ ಮಾಡಲು ಲುವಾಂಗ್ ಫೋ ಡೇಂಗ್ ಅವರ ಟೊಳ್ಳಾದ ಕಣ್ಣಿನ ಕುಳಿಗಳು ಕಾಣಿಸದಂತೆ ಸನ್ ಗ್ಲಾಸ್ ಹಾಕಲಾಗಿದೆ.

Leave a Reply

Your email address will not be published. Required fields are marked *

error: Content is protected !!