ಉದಯವಾಹಿನಿ, ಪಾಟ್ನಾ: ಮತ ಕಳವು ಆರೋಪ ಮಾಡಿ ಬಿಹಾರದಲ್ಲಿ ಮತದಾರರ ಅಧಿಕಾರ ಯಾತ್ರೆ’ ನಡೆಸುತ್ತಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ರ‍್ಯಾಲಿಯಲ್ಲಿ ಭದ್ರತಾ ಲೋಪವಾಗಿದೆ. ರ‍್ಯಾಲಿಯ 8ನೇ ದಿನವಾದ ಇಂದು ಪೂರ್ಣಿಮಾ ಜಿಲ್ಲೆಯಲ್ಲಿ ಬೈಕ್ ರ‍್ಯಾಲಿ ನಡೆಸುತ್ತಿದ್ದ ವೇಳೆ ಯುವಕನೊರ್ವ ಇದ್ದಕ್ಕಿದ್ದಂತೆ ರಾಹುಲ್ ಬಳಿ ಬಂದು ಅಪ್ಪಿಕೊಂಡು ಕೆನ್ನೆಗೆ ಮುತ್ತು ನೀಡಿದ್ದಾನೆ. ನಂತರ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ತಕ್ಷಣ ಯುವಕನನ್ನು ಹಿಡಿದು, ಆತನ ಕಪಾಳಕ್ಕೆ ಬಾರಿಸಿ ಅಲ್ಲಿಂದ ಕರೆದೊಯ್ದಿದ್ದಾರೆ.
ರಾಹುಲ್ ಬೈಕ್ ರ‍್ಯಾಲಿಗೆ ಆರ್‌ಜೆಡೆ ನಾಯಕ ತೇಜಸ್ವಿಯಾದವ್ ಸಾಥ್ ಕೊಟ್ಟಿದ್ದಾರೆ. ಇದೇ ವೇಳೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಸಮಾವೇಶದಲ್ಲಿ ಭಾಗಿಯಾಗಿದ್ದರು. ಈ ವೇಳೆ ಬಿಹಾರದ ಮತದಾರನ ಅಧಿಕಾರ ಯಾತ್ರೆಯಲ್ಲಿ ಡಿಕೆಶಿಗೆ ಜಾಗ ಇಲ್ಲ ಎಂದು ಟ್ರೋಲ್ ಮಾಡಲಾಗ್ತಿದೆ. ರಾಹುಲ್, ತೇಜಸ್ವಿ ಜೀಪ್ ಒಳಗೆ, ಜೀಪ್ ಕೆಳಗೆ ಕಾರ್ಯಕರ್ತರಂತೆ ನಿಂತಿರುವ ಡಿಕೆಶಿಯನ್ನು ಟ್ರೋಲ್ ಮಾಡಲಾಗ್ತಿದೆ.
ಚುನಾವಣಾ ಆಯೋಗವು ಬಿಹಾರದಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಮಾಡುತ್ತಿರುವುದರಿಂದ ಸಾಕಷ್ಟು ಅನುಕೂಲವಾದಂತೆ ಕಾಣುತ್ತಿದೆ. ಏಕೆಂದರೆ ನಕಲಿ ಮತದಾರರು ಒಬ್ಬೊಬ್ಬರಾಗೆ ಹೊರ ಬೀಳುತ್ತಿದ್ದಾರೆ. ಬಿಹಾರದ ಮತದಾರರ ಪಟ್ಟಿಯಲ್ಲಿ ಪಾಕಿಸ್ತಾನದ ಇಬ್ಬರು ಮಹಿಳೆಯರ ಹೆಸರಿರುವುದು ಬೆಳಕಿಗೆ ಬಂದಿದೆ. 1956ರಲ್ಲಿ ಭಾರತಕ್ಕೆ ಪ್ರವೇಶಿಸಿದ ಬಿಹಾರದ ಇಬ್ಬರು ಮಹಿಳೆಯರನ್ನು ಬಿಹಾರದ ಮತದಾರರ ಪಟ್ಟಿಯಲ್ಲಿ ಸೇರಿಸಿರುವುದು ಪತ್ತೆಯಾಗಿದೆ.
