ಉದಯವಾಹಿನಿ, ಪ್ಯಾರಿಸ್: ಸುಮಾರು ಆರು ವರ್ಷಗಳ ಬಳಿಕ ಹಣಕಾಸು ಕ್ರಿಯಾ ಕಾರ್ಯಪಡೆಯ ಬೂದು ಪಟ್ಟಿಯಿಂದ ಹೊರಗೆ ಬಂದಿದ್ದ ಪಾಕಿಸ್ತಾನ ಇದೀಗ ಮತ್ತೆ ಬೂದು ಪಟ್ಟಿ ಸೇರುವ ಅಪಾಯದಲ್ಲಿದೆ. ಅಕ್ರಮ ಡಿಜಿಟಲ್ ವಹಿವಾಟುಗಳಿಂದಾಗಿ ಇದೀಗ ಪಾಕಿಸ್ತಾನ ಮತ್ತೆ ಗ್ರೇ ಪಟ್ಟಿಗೆ ಸೇರುವ ಅಪಾಯದಲ್ಲಿದೆ. ಪ್ರಸ್ತುತ ಜನಸಂಖ್ಯೆಯ ಸುಮಾರು ಶೇ. 15ರಷ್ಟು ಮಂದಿ ನಡೆಸುತ್ತಿರುವ ಅನಿಯಂತ್ರಿತ ಡಿಜಿಟಲ್ ವಹಿವಾಟುಗಳನ್ನು ಸರಿಯಾಗಿ ನಿಯಂತ್ರಣಕ್ಕೆ ತರದೇ ಇದ್ದರೆ ದೇಶವು ಮತ್ತೆ ಹಣಕಾಸು ಕ್ರಿಯಾ ಕಾರ್ಯಪಡೆ (FATF) ಗ್ರೇ ಪಟ್ಟಿಗೆ ಜಾರಿಕೊಳ್ಳುವ ಅಪಾಯವಿದೆ ಎಂದು ಪಾಕಿಸ್ತಾನದ ಹಣಕಾಸು ಸಚಿವ ಮುಹಮ್ಮದ್ ಔರಂಗಜೇಬ್ ಹೇಳಿದ್ದಾರೆ.
ಸುಮಾರು ಆರು ವರ್ಷಗಳ ಬಳಿಕ ದೇಶವು ಹಣಕಾಸು ಕ್ರಿಯಾ ಪಡೆಯ ಗ್ರೇ ಪಟ್ಟಿಯಿಂದ ಬಹಳ ಕಷ್ಟದಿಂದ ಹೊರ ಬಂದಿತ್ತು. ಈಗ ಡಿಜಿಟಲ್ ವಹಿವಾಟುಗಳು ಮತ್ತೆ ಹಿಂದಕ್ಕೆ ಸರಿಯಬಹುದು ಎಂದು ಅವರು ಎಚ್ಚರಿಸಿದ್ದಾರೆ.
ದೇಶದಲ್ಲಿ ನಿರ್ದಿಷ್ಟ ಮಟ್ಟದ ಅಕ್ರಮ ಹಣಕಾಸು ಚಟುವಟಿಕೆ ಡಿಜಿಟಲ್ ಮೂಲಕ ನಡೆಯುತ್ತಿದೆ. ಪಾಕಿಸ್ತಾನ ಆರು ವರ್ಷಗಳ ಅನಂತರ ಹಣಕಾಸು ಕ್ರಿಯಾ ಕಾರ್ಯಪಡೆಯ ಬೂದು ಪಟ್ಟಿಯಿಂದ ಹೊರಬಂದಿದೆ. ಡಿಜಿಟಲ್ ವಹಿವಾಟುಗಳು ಮತ್ತೆ ದೇಶವನ್ನು ಹಿಮ್ಮುಖಗೊಳಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಇದು ಪಾಕಿಸ್ತಾನದ ದುರ್ಬಲ ಆರ್ಥಿಕ ನೀತಿ ಮತ್ತು ವಿಶ್ವಾಸಾರ್ಹತೆ ಮತ್ತು ಅಂತಾರಾಷ್ಟ್ರೀಯ ಅನುಸರಣಾ ಮಾನದಂಡಗಳನ್ನು ಜಾರಿಗೆ ತರುವಲ್ಲಿ ಅದರ ವೈಫಲ್ಯಗಳನ್ನು ಎತ್ತಿ ತೋರಿಸಿದೆ. ಔರಂಗಜೇಬ್ ಪ್ರಕಾರ ದೇಶದಲ್ಲಿ 25 ಮಿಲಿಯನ್‌ಗಿಂತಲೂ ಹೆಚ್ಚು ಪಾಕಿಸ್ತಾನಿಗಳು ಡಿಜಿಟಲ್ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ತಪ್ಪಿಸಲು ಇದಕ್ಕೆ ಕಡಿವಾಣ ಹಾಕುವುದು ಅಗತ್ಯ ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಡಿಜಿಟಲ್ ವಹಿವಾಟುಗಳು ಕಾನೂನುಬಾಹಿರವಾಗಿದೆ. ಡಿಜಿಟಲ್ ಕರೆನ್ಸಿಗಳನ್ನು ಔಪಚಾರಿಕವಾಗಿ ಕಾನೂನುಬದ್ಧಗೊಳಿಸಲು ಕಾನೂನುಗಳನ್ನು ತಿದ್ದುಪಡಿ ಮಾಡುವಲ್ಲಿ ದೇಶವು ಇನ್ನೂ ವಿಳಂಬ ಮಾಡುತ್ತಿದೆ. ಕ್ರಿಪ್ಟೋ ಮತ್ತು ಡಿಜಿಟಲ್ ಸ್ವತ್ತುಗಳಿಗೆ ನಿಯಂತ್ರಕವನ್ನು ರಚಿಸಲು ಪ್ರಸ್ತಾವಿತ ಸುಗ್ರೀವಾಜ್ಞೆಯು ಇನ್ನೂ ಫೆಡರಲ್ ಕ್ಯಾಬಿನೆಟ್ ಅನುಮೋದನೆಗಾಗಿ ಕಾಯುತ್ತಿದೆ ಎಂದು ಔರಂಗಜೇಬ್ ಹೇಳಿದರು.
