ಉದಯವಾಹಿನಿ, ಕಠ್ಮಂಡು: ನಕಲಿ ಭಾರತೀಯ ನೋಟುಗಳನ್ನು ಹೊಂದಿದ್ದ ಇಬ್ಬರು ಬಿಹಾರದ ವ್ಯಕ್ತಿಗಳನ್ನು ನೇಪಾಳದ ರೌತಹಟ್ ಜಿಲ್ಲೆಯಲ್ಲಿ ಅಧಿಕಾರಿಗಳು ಬಂಧಿಸಿದ್ದಾರೆ.
ಬಿಹಾರದ ಸೀತಾಮರ್ಹಿ ಜಿಲ್ಲೆಯ ವಿಕ್ರಮ್ ಕುಮಾರ್ ಪಾಸ್ವಾನ್ (30) ಮತ್ತು ರಾಹೇಶ್ ಕುಮಾರ್ ಸಾಹ (42) ಬಂಧಿತರು. ಅವರು ₹500 ಮುಖಬೆಲೆಯ ಒಂದು ನೋಟು ಮತ್ತು ₹200 ಮುಖಬೆಲೆಯ 10 ನಕಲಿ ಭಾರತೀಯ ನೋಟುಗಳೊಂದಿಗೆ ಭಾರತೀಯ ನೋಂದಾಯಿತ ಮೋಟಾರ್ ಬೈಕ್‌ನಲ್ಲಿ ನೇಪಾಳವನ್ನು ಪ್ರವೇಶಿಸುವಾಗ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಸಶಸ್ತ್ರ ಪೊಲೀಸ್ ಪಡೆಯ ವಕ್ತಾರ ಮನೀಶ್ ಥಾಪಾ ಅವರು ಬುಧವಾರ ತಿಳಿಸಿದ್ದಾರೆ.ಶಂಕಿತರನ್ನು ರೌತಹಟ್ ಜಿಲ್ಲಾ ಪೊಲೀಸರಿಗೆ ಒಪ್ಪಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
