ಉದಯವಾಹಿನಿ, ಕನ್ನಡ ಕಿರುತೆರೆ ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ಗೌತಮಿ ಜಾಧವ್ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಮಂಗಳಾಪುರಂ ಚಿತ್ರದಲ್ಲಿ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ಕವಲು ದಾರಿ ಖ್ಯಾತಿಯ ರಿಷಿ ಈ ಸಿನಿಮಾದ ನಾಯಕ ನಟ. ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ನಾಯಕಿಯಾಗಿ ನಟಿಸಿರುವ ಗೌತಮಿಗೆ, ಹಿರಿತೆರೆಯಲ್ಲಿ ಹೇಳಿಕೊಳ್ಳುವಂಥ ಬ್ರೇಕ್ ಸಿಕ್ಕಿಲ್ಲ. ಮಂಗಳಾಪುರಂ ಅವರ ಕೈ ಹಿಡಿಯುತ್ತಾ ಕಾದು ನೋಡಬೇಕು.
ಅಂದಹಾಗೆ ಈ ಸಿನಿಮಾವನ್ನು ತುಳು ಚಿತ್ರರಂಗದ ನಿರ್ದೇಶಕ ರಂಜಿತ್ ರಾಜ್ ಸುವರ್ಣ ನಿರ್ದೇಶನ ಮಾಡುತ್ತಿದ್ದಾರೆ. ಮರ್ಡರ್ ಮಿಸ್ಟರಿ ಮತ್ತು ನಂಬಿಕೆ ಹಾಗೂ ಅಪನಂಬಿಕೆಗಳ ಸುತ್ತ ನಡೆಯುವಂಥ ಕಥೆಯನ್ನು ನಿರ್ದೇಶಕರು ಈ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರಂತೆ. ರಿಷಿ ಜೊತೆಗೆ ಕಾಶಿನಾಥ್ ಅವರ ಪುತ್ರ ಅಭಿಮನ್ಯು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಗೌತಮಿ ಈ ಸಿನಿಮಾದಲ್ಲಿ ಸುಕನ್ಯಾ ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದು, ಆಸ್ತಿಕರ ನಾಡಿನಲ್ಲಿ ನಾಸ್ತಿಕನ ಮಡದಿಯಾಗಿ ಗೌತಮಿ ಕಾಣಿಸಿಕೊಳ್ಳಲಿದ್ದಾರೆ. ತಮ್ಮ ಪಾತ್ರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಗೌತಮ್, ಈ ಹೊಸ ಪಾತ್ರಕ್ಕೆ ತಮ್ಮೆಲ್ಲರ ಪ್ರೋತ್ಸಾಹವಿರಲಿ ಅಂತ ಅವರು ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!