ಉದಯವಾಹಿನಿ, ಬೆಂಗಳೂರು: ಅಬಕಾರಿ ಇಲಾಖೆಯ ಆದಾಯವು ಎರಡು ತ್ರೈಮಾಸಿಕದಲ್ಲಿ ನಿರೀಕ್ಷೆ ಮೀರಿ ಸಂಗ್ರಹವಾಗಿದೆ. ಜೊತೆಗೆ ಪ್ರೀಮಿಯಂ ಬ್ರ‍್ಯಾಂಡ್ ಮದ್ಯದ ದರ ಇಳಿಕೆ ಮಾಡುವ ಚಿಂತನೆ ಇದೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್ ತಿಳಿಸಿದರು.
ವಿಧಾನಸೌಧದಲ್ಲಿ ಅಬಕಾರಿ ಇಲಾಖೆ ಪ್ರಗತಿ ಪರಿಶೀಲನೆ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಬಕಾರಿ ಇಲಾಖೆಯಿಂದ ಆದಾಯದ ನಿರೀಕ್ಷೆ ಇರುತ್ತದೆ. ಎರಡು ತ್ರೈಮಾಸಿಕದಲ್ಲಿ ನಮ್ಮ ಆದಾಯ ನಿರೀಕ್ಷೆಗೂ ಮೀರಿ ಸಂಗ್ರಹವಾಗಿದೆ. 2 ತ್ರೈಮಾಸಿಕದಲ್ಲಿ ನಮ್ಮ ನಿರೀಕ್ಷೆ 16,290 ಕೋಟಿ ರೂ. ಇತ್ತು. ಆದರೆ ಈಗ 16,358.76 ಕೋಟಿ ರೂ. ಸಂಗ್ರಹವಾಗಿದೆ. ನಿರೀಕ್ಷೆ ಮೀರಿ 142% ಜಾಸ್ತಿ ಸಂಗ್ರಹ ಆಗಿದೆ ಎಂದರು.

ನಮ್ಮ ಇಲಾಖೆಯಲ್ಲಿ ಹೊಸ ಹೊಸ ಬದಲಾವಣೆ ತರಲಾಗಿದೆ. ಮೊದಲ ಬಾರಿಗೆ ಅಬಕಾರಿ ಹುದ್ದೆಗಳ ನೇಮಕ ಕೌನ್ಸಿಲಿಂಗ್ ಮೂಲಕ ಮಾಡಲಾಗ್ತಿದೆ. ಲೈಸೆನ್ಸ್‌ನ್ನು ಪ್ರತಿ ವರ್ಷ ನವೀಕರಣ ಮಾಡಬೇಕಿತ್ತು. ಆದರೆ ಈಗ ಇದನ್ನ 5 ವರ್ಷಕ್ಕೆ ಮಾಡಿದ್ದೇವೆ. CL-7 ಪರ್ಮಿಷನ್‌ಗೆ ಕಾಲಾವಕಾಶ ಬೇಕಿತ್ತು. ಆದರೆ ಈಗ ಇದರಲ್ಲಿ ಕೆಲವು ಬದಲಾವಣೆ ಮಾಡಿ ಆದಷ್ಟು ಬೇಗ ಅನುಮತಿ ಕೊಡುವ ಕೆಲಸ ಮಾಡ್ತಿದ್ದೇವೆ. ಡ್ರಗ್ಸ್, ಗಾಂಜಾ ಹಾವಳಿ ತಡೆಯಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡ್ತಿದ್ದಾರೆ ಎಂದು ಹೇಳಿದರು. CL2/CL9 ಅನುಮತಿ ಕೊಡಲು ನಿಯಮ ಬದಲಾವಣೆ ಮಾಡಿ, ಹರಾಜು ಮೂಲಕ ಕೊಡುವ ನಿರ್ಧಾರ ಮಾಡಲಾಗಿದೆ. 571 ಹರಾಜು ಹಾಕಿ ಅನುಮತಿ ಕೊಡ್ತೀವಿ. ಆದಷ್ಟೂ ಬೇಗ ಈ ಪ್ರತಿಕ್ರಿಯೆ ಮಾಡ್ತೀವಿ. ಜನಸಂಖ್ಯೆ ಅನುಗುಣವಾಗಿ ಜಾಸ್ತಿ ಅನುಮತಿ ಕೊಡುವ ಕೆಲಸ ಮಾಡ್ತೀವಿ ಎಂದು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *

error: Content is protected !!