ಉದಯವಾಹಿನಿ, ನವದೆಹಲಿ: ಪ್ರಯಾಣಿಕರಿಗೆ ಗುಣಮಟ್ಟದ ಊಟವನ್ನು ಒದಗಿಸುವಲ್ಲಿ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ ಸಂಪೂರ್ಣ ವಿಫಲವಾಗಿದೆ ಎಂಬುದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ. ಉತ್ತರ ಪ್ರದೇಶದ ಪ್ರಯಾಣಿಕನೊಬ್ಬ ತಮ್ಮ ಪ್ರಯಾಣದ ವೇಳೆ ವೆಜ್ ಥಾಲಿಯನ್ನು ಆರ್ಡರ್ ಮಾಡಿದ್ದಾನೆ, ‘ನಿಮ್ಮ ದೂರನ್ನು ದಾಖಲಿಸಲಾಗಿದೆ. ಪ್ರಯಾಣಿಕರು ಅದರ ಫೋಟೋವನ್ನು ತೆಗೆದುಕೊಂಡು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ನಾನು ಆರ್ಡರ್ ಮಾಡಿದ ಊಟದಲ್ಲಿ ಜಿರಳೆ ದೊರೆತಿದೆ ಅಂತ ತಿಳಿಸಿದ್ದಾರೆ. ಕೂಡಲೇ ಐಆರ್ಸಿಟಿಸಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ನಿಮ್ಮ ದೂರನ್ನು ದಾಖಲಿಸಲಾಗಿದೆ. ನಿಮ್ಮ ದೂರು ಸಂಖ್ಯೆಯನ್ನು ಎಸ್ಎಂಎಸ್ ಮೂಲಕ ಕಳುಹಿಸಲಾಗಿದೆ ಎಂದು ತಿಳಿಸಿದೆ.
