ಉದಯವಾಹಿನಿ , ಕೇಪ್ ಟೌನ್‌: ದಕ್ಷಿಣ ಆಫ್ರಿಕಾದ ಪೂರ್ವ ಕ್ವಾಝುಲು-ನತಾಲ್ ಪ್ರಾಂತ್ಯದಲ್ಲಿ ಮಿನಿಬಸ್ ಟ್ಯಾಕ್ಸಿ ಮತ್ತು ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ 11 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಪೊಲೀಸರು ಹಾಗೂ ತುರ್ತು ಸೇವೆಗಳು ತಿಳಿಸಿವೆ. ಶಾಲಾ ಮಕ್ಕಳನ್ನು ಒಳಗೊಂಡಿದ್ದ ಮತ್ತೊಂದು ಮಾರಣಾಂತಿಕ ಅಪಘಾತ ಸಂಭವಿಸಿದ ಕೇವಲ ಒಂದೇ ವಾರದ ಅಂತರದಲ್ಲಿ ಈ ಭೀಕರ ಘಟನೆ ನಡೆದಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಘಟನಾ ಸ್ಥಳದಲ್ಲೇ ಶಾಲಾ ಮಕ್ಕಳು ಸೇರಿದಂತೆ 11 ಮಂದಿ ಮೃತಪಟ್ಟಿದ್ದಾರೆ ಎಂದು ಪ್ರಾಂತೀಯ ಸಾರಿಗೆ ಅಧಿಕಾರಿ ಸಿಬೊನಿಸೊ ಡೂಮಾ ತಿಳಿಸಿದ್ದಾರೆ.

ಈ ಅಪಘಾತದಲ್ಲಿ 11 ಮಂದಿ ಮೃತಪಟ್ಟು, ಅವಶೇಷಗಳಡಿ ಸಿಲುಕಿದ್ದ ಮಿನಿಬಸ್‌ನ ಚಾಲಕ ಸೇರಿದಂತೆ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಖಾಸಗಿ ಅರೆವೈದ್ಯಕೀಯ ಸೇವಾ ಸಂಸ್ಥೆ ಎಎಲ್‌ಎಸ್ ಪ್ಯಾರಾಮೆಡಿಕ್ಸ್‌ನ ವಕ್ತಾರ ಗ್ಯಾರಿತ್ ಜಾಮೀಸನ್‌ ಹೇಳಿದ್ದಾರೆ. ಈ ವಾರದ ಆರಂಭದಲ್ಲಿ ನೈರುತ್ಯ ಜೊಹಾನ್ಸ್‌ ಬರ್ಗ್‌ನಲ್ಲಿ ಮಿನಿಬಸ್ ಟ್ಯಾಕ್ಸಿ ಮತ್ತು ಟ್ರಕ್ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ 14 ಶಾಲಾ ಮಕ್ಕಳು ಮೃತಪಟ್ಟ ಘಟನೆ ನಡೆದಿದ್ದು, ಅದಾದ ನಂತರ ಒಂದೇ ವಾರದೊಳಗೆ ಸಂಭವಿಸಿದ ಎರಡನೇ ರಸ್ತೆ ಅಪಘಾತ ಇದಾಗಿದೆ.

Leave a Reply

Your email address will not be published. Required fields are marked *

error: Content is protected !!