
ಉದಯವಾಹಿನಿ, ಬೆಂಗಳೂರು: ಕಾಂಗ್ರೆಸ್‌ನಲ್ಲಿ ಸೆಪ್ಟೆಂಬರ್ ಕ್ರಾಂತಿ ಸಪ್ಪೆಯಾಗಿದ್ದರೂ ಗೆರಿಲ್ಲಾ ವಾರ್ ಬಿಸಿ ಜೋರಾಗಿದೆ. ರಾಜಣ್ಣ ಆಂಡ್ ಸನ್ ಡಿಕೆಶಿ ವಿರುದ್ಧ ತಿರುಗಿಬಿದ್ದಿದ್ದು, ಸಿಎಂ ಗೇಮ್ ಅಸಲಿ ಆಟ ಚಾಲೂ ಆಗಿದೆ. ಕಾಂಗ್ರೆಸ್‌ನಲ್ಲಿ ಮತ್ತೊಂದು ಸುತ್ತಿನ ಪವರ್ ಗೇಮ್ ವಾರ್ ಶುರುವಾಗಿದೆ. ಅದರ ಭಾಗವಾಗಿಯೇ ಡಿಕೆಶಿ ವಿರುದ್ಧ ರಾಜಣ್ಣ ರಾಜಣ್ಣ ಪುತ್ರ ರಾಜೇಂದ್ರ ವಾಕ್ಸಮರಕ್ಕೆ ಇಳಿದಿದ್ದಾರೆ. ತಂದೆ, ಮಗನ ವಾಕ್ಸಮರಕ್ಕೆ ಡಿಕೆ ಶಿವಕುಮಾರ್ ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದರೂ ಡಿಕೆಶಿ ಆಪ್ತ ಮಾಗಡಿ ಬಾಲಕೃಷ್ಣ ಗಂಭೀರವಾದ ಪ್ರತಿಕ್ರಿಯೆ ನೀಡಿ ತಿರುಗೇಟು ನೀಡುತ್ತಿದ್ದಾರೆ.
ಸಿಎಂ ಸ್ಥಾನಕ್ಕಾಗಿ ಬಿಜೆಪಿ ಕದ ತಟ್ಟುತ್ತಾರೆ ಎನ್ನುವ ಮೂಲಕ ಡಿಕೆಶಿ ವಿರುದ್ದ ರಾಜಣ್ಣ ನಿರ್ಣಾಯಕ ಯುದ್ಧ ಸಾರಲು ತಂತ್ರ ಹೆಣೆದಿದ್ದಾರೆ ಎನ್ನಲಾಗಿದೆ. ಡಿಕೆಶಿ ಸಿಎಂ ಆಗಲು ಬಿಜೆಪಿಗೆ ಹೋಗುತ್ತಾರೆ ಎನ್ನುವುದೇ ಎನ್ನುವುದೇ ಸದ್ಯಕ್ಕೆ ರಾಜಣ್ಣ ಪಾಲಿನ ಸೆಪ್ಟೆಂಬರ್ ಅಸ್ತ್ರ ಎನ್ನಲಾಗುತ್ತಿದೆ.
