ಉದಯವಾಹಿನಿ, ಬೆಂಗಳೂರು: ಕಾಂಗ್ರೆಸ್ ಯಾವಾಗಲು ಬೇರೆ ಧರ್ಮದ ಪರವಾಗಿ ಇದ್ದೇವೆ ಅಂತ ಅನೇಕ ಸಮಯದಲ್ಲಿ ತೋರಿಸಿದೆ ಎಂದು ಕಾಂಗ್ರೆಸ್ ವಿರುದ್ಧ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಸೆಪ್ಟೆಂಬರ್ 5 ರಂದು ಬೆಂಗಳೂರಿನಲ್ಲಿ ಮುಸ್ಲಿಂ ಧರ್ಮದ ಕಾರ್ಯಕ್ರಮ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಅವರು ಬೇರೆ ಧರ್ಮದ ಪರವಾಗಿ ಇದ್ದೇವೆ ಎಂದು ಅನೇಕ ಸಮಯದಲ್ಲಿ ಸಾಬೀತು ಮಾಡೋಕೆ ಹೊರಟಿದ್ದಾರೆ. ದಸರಾ ಉದ್ಘಾಟನೆ ಬಾನು ಮುಷ್ತಾಕ್ ಅವರಿಂದ ಮಾಡೋ ಅವಶ್ಯಕತೆ ಇರಲಿಲ್ಲ. ಬಹಳ ಜನ ಸಾಧಕರು ಸಮಯದಲ್ಲಿ ಇದ್ದರು. ಬೇರೆಯವರನ್ನ ಕರೆದು ಮಾಡಬಹುದಿತ್ತು. ಆದರೆ ಈ ಸರ್ಕಾರದ ಹಿಂದಿನ ಉದ್ದೇಶಗಳೇನು ಎಂದು ಪ್ರಶ್ನೆ ಮಾಡಿದರು.

ಸಮಾಜಕ್ಕೆ ಯಾವ ಸಂದೇಶ ರವಾನೆ ಮಾಡುವ ಕೆಲಸ ರಾಜ್ಯದ ಸಿಎಂ ಹಾದಿಯಾಗಿ ಎಲ್ಲರು ಮಾಡ್ತಿದ್ದಾರೆ ಎಂಬುದನ್ನ ಆಲೋಚನೆ ಮಾಡಬೇಕು. ಧರ್ಮ ಧರ್ಮದ ಬಗ್ಗೆ ಕಿಚ್ಚು ಹಬ್ಬಿಸಿ, ಒಬ್ಬರಿಗೊಬ್ಬರ ಮಧ್ಯೆ ದ್ವೇಷ ಕ್ರಿಯೇಟ್ ಮಾಡಿ ಇದರ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳೋ ಕೆಲಸ ಆಗಬಾರದು. ಇದು ನಿಜಕ್ಕೂ ಖಂಡನೀಯ. ಅವರ ಧರ್ಮಕ್ಕೂ ನಾವು ಗೌರವ ಕೊಡೋಣ. ನಮ್ಮ ಧರ್ಮವನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕಾಗುತ್ತದೆ. ಇವತ್ತು ಧರ್ಮಸ್ಥಳ ಆಯ್ತು, ನಾಳೆ ಚಾಮುಂಡಿ ಬೆಟ್ಟ ಆಗುತ್ತದೆ. ಹೀಗೆ ಧಾರ್ಮಿಕ ಸ್ಥಳಗಳನ್ನ ಟಾರ್ಗೆಟ್ ಮಾಡಿಕೊಂಡು ಹೊರಟರೇ ಹಿಂದುಗಳಾಗಿ ನಾವು ಕೈಕಟ್ಟಿ ಕೂರೋಕೆ ಆಗಲ್ಲ. ಸರ್ಕಾರದ ಪೊಲಿಟಿಕಲ್ ಅಜೆಂಡಾ ನೂರಾರು ಇರಬಹುದು. ಇದರಿಂದ ಸಮಾಜದ ಮೇಲೆ ಆಗೋ ಡ್ಯಾಮೇಜ್ ಏನು ಎಂಬುದರ ಬಗ್ಗೆ ಆಲೋಚನೆ ಮಾಡಬೇಕು.

Leave a Reply

Your email address will not be published. Required fields are marked *

error: Content is protected !!