ಉದಯವಾಹಿನಿ, ಬೀಜಿಂಗ್: ಮನುಷ್ಯರು ಹಚ್ಚೆ ಹಾಕಿಸಿಕೊಳ್ಳುವುದು ಇತ್ತೀಚೆಗೆ ಟ್ರೆಂಡ್ ಆಗಿದೆ. ಸೆಲೆಬ್ರಿಟಿಗಳನ್ನು ನೋಡಿ ಬಹುತೇಕ ಮಂದಿ ಫಾಲೋ ಮಾಡುತ್ತಾರೆ. ಹಚ್ಚೆ ಹಾಕಿಸುವಾಗ ತುಂಬಾ ನೋವಾಗುತ್ತದೆ. ಕೆಲವರಿಗೆ ಜ್ವರ ಕೂಡ ಬರುತ್ತದೆ. ಇದೀಗ ಶ್ವಾನವೊಂದಕ್ಕೆ ಹಚ್ಚೆ ಹಾಕಿಸಿದ್ದಕ್ಕೆ ಅದರ ಮಾಲೀಕ ವ್ಯಾಪಕ ಟೀಕೆಗೆ ಗುರಿಯಾಗಿದ್ದಾನೆ. ಚೀನಾದ ಶಾಂಘೈನ ಪೆಟ್ ಫೇರ್ ಏಷ್ಯಾದಲ್ಲಿ ಕೂದಲುರಹಿತ ನಾಯಿಯೊಂದನ್ನು ಪ್ರದರ್ಶಿಸಲಾಗಿದೆ. ಅದರ ಮಾಲೀಕ ಅರೆವಳಿಕೆ ಬಳಸದೆ ಹಚ್ಚೆ ಹಾಕಿಸಿರುವುದಾಗಿ ಬಹಿರಂಗಪಡಿಸಿದ ನಂತರ ಭಾರಿ ಟೀಕೆ ವ್ಯಕ್ತವಾಯಿತು.ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೊವನ್ನು ಮೊದಲು ಆಗಸ್ಟ್ 22ರಂದು ಏಷ್ಯಾದ ಅತಿದೊಡ್ಡ ಸಾಕುಪ್ರಾಣಿ ಉದ್ಯಮ ಕಾರ್ಯಕ್ರಮಗಳಲ್ಲಿ ಒಂದಾದ ಪೆಟ್ ಫೇರ್ ಏಷ್ಯಾದಲ್ಲಿ ಭಾಗವಹಿಸಿದವರು ಪೋಸ್ಟ್ ಮಾಡಿದ್ದರು. ವಿಡಿಯೊದಲ್ಲಿ ಮೆಕ್ಸಿಕನ್ ಕೂದಲುರಹಿತ ನಾಯಿಯ ವಯಸ್ಸು ಬಹಿರಂಗವಾಗಿಲ್ಲ. ಶ್ವಾನ ದೇಹವು ದೊಡ್ಡ, ವರ್ಣರಂಜಿತ ಡ್ರ್ಯಾಗನ್ ಟ್ಯಾಟೂಗಳಿಂದ ಮುಚ್ಚಲ್ಪಟ್ಟಿದೆ. ದಪ್ಪ ಚಿನ್ನದ ಬಣ್ಣದ ಸರಪಳಿ ಮತ್ತು ಕೈಗಡಿಯಾರದಿಂದ ಅಲಂಕರಿಸಲ್ಪಟ್ಟ ನಾಯಿಯನ್ನು ವಿಡಿಯೊದಲ್ಲಿ ಕಾಣಬಹುದು. ಅರೆವಳಿಕೆ ಬಳಸದೆ ಟ್ಯಾಟೂ ಹಾಕಿದ ಕಾರಣಕ್ಕಾಗಿ ನಾಯಿಯ ಮಾಲೀಕರನ್ನು ಸಾಕುಪ್ರಾಣಿ ಪ್ರದರ್ಶನದಿಂದ ತೆಗೆದುಹಾಕಲಾಯಿತು.

Leave a Reply

Your email address will not be published. Required fields are marked *

error: Content is protected !!