ಉದಯವಾಹಿನಿ, ಸೊಲಾಪುರ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಭಾರತೀಯ ಪೊಲೀಸ್ ಸೇವೆ (IPS) ಅಧಿಕಾರಿ ಅಂಜಲಿ ಕೃಷ್ಣ ಅವರ ನಡುವೆ ಫೋನ್ ಸಂಭಾಷಣೆಯಲ್ಲಿ ತೀವ್ರ ವಾಗ್ವಾದ ನಡೆದಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೊಲಾಪುರ ಜಿಲ್ಲೆಯ ಕುರ್ಡು ಗ್ರಾಮದಲ್ಲಿ ಕಾನೂನುಬಾಹಿರ ಮರಮ್ (ಕೆಂಪು ಮಣ್ಣು) ಗಣಿಗಾರಿಕೆ ತನಿಖೆಗೆ ತೆರಳಿದ್ದ ಅಂಜಲಿ ಕೃಷ್ಣ, ಅಜಿತ್ ಪವಾರ್ ಅವರ ಧ್ವನಿಯನ್ನು ಗುರುತಿಸಲು ವಿಫಲವಾಗಿದ್ದರಿಂದ ಈ ವಿವಾದ ಭುಗಿಲೆದ್ದಿದೆ.
ಘಟನೆಯ ವಿವರ: ತನಿಖೆಯ ವೇಳೆ ಗ್ರಾಮಸ್ಥರು ಮತ್ತು ಅಧಿಕಾರಿಗಳ ನಡುವೆ ಜಟಾಪಟಿ ಉಂಟಾಯಿತು. ಈ ಸಂದರ್ಭದಲ್ಲಿ ಎನ್‌ಸಿಪಿ ಕಾರ್ಯಕರ್ತ ಬಾಬಾ ಜಗತಾಪ್, ಅಜಿತ್ ಪವಾರ್‌ಗೆ ಕರೆ ಮಾಡಿ ಫೋನ್ ಅನ್ನು ಅಂಜಲಿ ಕೃಷ್ಣ ಅವರಿಗೆ ನೀಡಿದರು. “ಕೇಳಿ, ನಾನು ಉಪಮುಖ್ಯಮಂತ್ರಿ ಮಾತನಾಡುತ್ತಿದ್ದೇನೆ ಮತ್ತು ಅದನ್ನು ನಿಲ್ಲಿಸಲು ನಿಮಗೆ ಆದೇಶ ನೀಡುತ್ತಿದ್ದೇನೆ” ಎಂದಿದ್ದಾರೆ. “ನಿನಗೆ ಎಷ್ಟು ಧೈರ್ಯ? ನಾನು ನಿನ್ನ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ಕನಿಷ್ಠ ಪಕ್ಷ ನನ್ನ ಮುಖವನ್ನಾದರೂ ನೀನು ಗುರುತಿಸುತ್ತೀಯ ಅಲ್ವಾ?” ಎಂದು ಅವರು ಕೇಳಿದ್ದಾರೆ. ಇದಾದ ಬಳಿಕ, ಪವಾರ್ ವಿಡಿಯೋ ಕರೆಗೆ ಬದಲಾಯಿಸಿ ಅಂಜಲಿ ಕೃಷ್ಣ ಅವರ ಜೊತೆ ನೇರವಾಗಿ ಮಾತನಾಡಿದ್ದಾರೆ. ರಸ್ತೆ ನಿರ್ಮಾಣಕ್ಕೆ ಬಳಸುವ ಮರಮ್‌ನ ಕಾನೂನುಬಾಹಿರ ಗಣಿಗಾರಿಕೆಯ ವಿರುದ್ ಕ್ರಮ ಕೈಗೊಳ್ಳುವುದನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
