ಉದಯವಾಹಿನಿ, ಮುಂಬೈ:  2000 ರೂ ಮುಖಬೆಲೆಯ ನೋಟುಗಳನ್ನು ವಾಪಸ್ ಪಡೆದ ಬಳಿಕ ಈ ವರೆಗೂ ಶೇ.72ರಷ್ಚು ನೋಟುಗಳು ಬ್ಯಾಂಕಿಗೆ ವಾಪಸ್ ಆಗಿದ್ದು, ನೋಟು ವಾಪಸಾತಿಯಿಂದ ಆರ್ಥಿಕತೆ ಮೇಲೆ ಪರಿಣಾಮ ಇಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ದೇಶದಲ್ಲಿ 2 ಸಾವಿರ ರೂ. ಮುಖ ಬೆಲೆಯ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುತ್ತಿರುವುದು ದೇಶದ ಆರ್ಥಿಕತೆ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲ ಎಂದು ರಿಸರ್ವ್ ಬ್ಯಾಂಕ್‌ನ ಗವರ್ನರ್ ಶಕ್ತಿಕಾಂತದಾಸ್ ಹೇಳಿದ್ದಾರೆ. ಕಳೆದ ಮೇ 19 ರಂದು ರಿಸರ್ವ್ ಬ್ಯಾಂಕ್ 2 ಸಾವಿರ ಮುಖ ಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವ ತೀರ್ಮಾನ ಮಾಡಿತ್ತು. ಈ ನೋಟುಗಳನ್ನು ಜನ ಸೆಪ್ಟೆಂಬರ್ 3 ರವರೆಗೂ ಬ್ಯಾಂಕ್‌ಗಳಲ್ಲಿ ಬದಲಿಸಲು, ಠೇವಣಿ ಮಾಡಲು ಅವಕಾಶವನ್ನು ಕಲ್ಪಿಸಿತ್ತು.

ಇದರಿಂದ ದೇಶದ ಆರ್ಥಿಕತ ಮೇಲೆ ವ್ಯತಿರಿಕ್ತ ಪರಿಣಾಮಗಳಾಗಬಹುದು ಎಂಬ ವರದಿಗಳು ಸುಳ್ಳಾಗಿದ್ದು, 2 ಸಾವಿರ ಮುಖ ಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವ ನಿರ್ಧಾರದಿಂದ ಆರ್ಥಿಕತೆ ಮೇಲೆ ಯಾವುದೇ ಋಣಾತ್ಮಕ ಪರಿಣಾಮ ಬೀರಿಲ್ಲ ಎಂದು ರಿಸರ್ವ್ ಬ್ಯಾಂಕ್‌ನ ಶಕ್ತಿಕಾಂತ್ ದಾಸ್ ಆಂಗ್ಲ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಭಾರತದ ಆರ್ಥಿಕತೆ ಅನಿಶ್ಚಿತತೆಯ ಸವಾಲುಗಳನ್ನು ಎದುರಿಸುತ್ತಿದೆ. ನಮ್ಮ ಮುಂದೆ 2-3 ಸವಾಲುಗಳಿವೆ. ಮೊದಲನೆಯದು ಅಂತಾರಾಷ್ಟ್ರೀಯ ಅನಿಶ್ಚಿತತೆ, ಎರಡನೆಯದು ಎಲ್ನಿನೋ ಚಂಡಮಾರುತದ ಮುನ್ಸೂಚನೆ ಮತ್ತು ಇತರ ಮುಖ್ಯವಾಗಿ ಹವಮಾನ ಸಂಬಂಧಿತ ಅನಿಶ್ಚಿತತೆಯ ಸವಾಲುಗಳು ದೇಶದ ಆರ್ಥಿಕ ಪರಿಸ್ಥಿತಿಯ ಮುಂದಿವೆ ಎಂದು ಅವರು ಹೇಳಿದರು. ಅಲ್ಲದೆ ಹಣ ದುಬ್ಬರವನ್ನು ಶೇ.4ಕ್ಕೆ ಇಳಿಸಲು ಶ್ರಮಿಸುತ್ತಿದ್ದೇವೆ. ಆಹಾರ, ಹಣ ದುಬ್ಬರಕ್ಕೆ ಎಲ್ನಿನೋ ಮುನ್ಸೂಚನೆ ಸವಾಲಾಗಿದೆ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!