ಉದಯವಾಹಿನಿ, ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಹೋದರಿ ಅಲೀಮಾ ಖಾನಮ್ ಅವರ ಮೇಲೆ ರಾವಲ್ಪಿಂಡಿಯ ಅಡಿಯಾಲ ಜೈಲಿನ ಹೊರಗೆ ಮೊಟ್ಟೆ ಎಸೆದ ಘಟನೆ ನಡೆದಿದೆ.ಮೊಟ್ಟೆ ಆಕೆಯ ಮುಖಕ್ಕೆ ಹೊಡೆದು, ಬಟ್ಟೆಯ ಮೇಲೆ ಬಿದ್ದ ದೃಶ್ಯಾವಳಿಯ ವೀಡಿಯೋ ವೈರಲ್‌ ಆಗಿದೆ. ಈ ಘಟನೆಯಿಂದ ಇಮ್ರಾನ್‌ ಖಾನ್‌ ಸಹೋದರಿ ಬೇಸರಗೊಂಡಿದ್ದಾರೆ. ಖಾನಮ್ ಮೇಲೆ ಮೊಟ್ಟೆ ಎಸೆದ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಬೆಂಬಲಿಗರಾಗಿದ್ದಾರೆ.
ಪಿಟಿಐ ಬೆಂಬಲಿಗರು ಈ ಕೃತ್ಯವನ್ನು ಖಂಡಿಸಿದ್ದಾರೆ. ಇಂತಹ ನಡವಳಿಕೆಯು ಅನೈತಿಕ ಮಾತ್ರವಲ್ಲ, ದುರದೃಷ್ಟಕರವೂ ಆಗಿದೆ. ರಾಜಕೀಯ ಭಿನ್ನಾಭಿಪ್ರಾಯ ಇರುವವರನ್ನು ಅಪಮಾನಿಸುವುದು ಸರಿಯಲ್ಲ ಎಂದು ಬೇಸರ ಹೊರಹಾಕಿದ್ದಾರೆ. ಮತ್ತೊಬ್ಬರು ಪೋಸ್ಟ್‌ ಹಾಕಿ, ಈ ಅವಮಾನಕರ ಕೃತ್ಯವನ್ನು ಅಸಿಮ್ ಮುನೀರ್ ಮತ್ತು ನೂನ್ ಲೀಗ್ ಮಾಡಿದ್ದಾರೆ. ಈ ಜನರು ಖಾನ್ ಮತ್ತು ಅವರ ಕುಟುಂಬಕ್ಕೆ ತುಂಬಾ ಹೆದರುತ್ತಾರೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!