ಉದಯವಾಹಿನಿ, ನವದೆಹಲಿ: ಬಹುನಿರೀಕ್ಷಿತ 2025ರ ಏಷ್ಯಾ ಕಪ್‌ ಟೂರ್ನಿಯು ಸೆಪ್ಟಂಬರ್‌ 9 ರಂದು ಆರಂಭವಾಗಲಿದೆ. ಸೆಪ್ಟಂಬರ್‌ 10 ರಂದು ಯುಎಇ ವಿರುದ್ಧ ಆಡುವ ಮೂಲಕ ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಭಾರತ ತಂಡ ಈ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ. ಯುಎಇ, ಒಮನ್‌ ಹಾಗೂ ಪಾಕಿಸ್ತಾನ ತಂಡಗಳ ಜೊತೆಗೆ ಟೂರ್ನಿಯ ಎ ಗುಂಪಿನಲ್ಲಿ ಸ್ಥಾನವನ್ನು ಪಡೆದಿದೆ. ಭಾರತ ತಂಡದ ಪ್ಲೇಯಿಂಗ್‌ XI ಬಹುತೇಕ ಖಚಿತವಾಗಿದೆ. ಶುಭಮನ್‌ ಗಿಲ್‌ ಉಪ ನಾಯಕನಾಗಿ ತಂಡಕ್ಕೆ ಮರಳಿರುವುದರಿಂದ ತಂಡದ ಪ್ಲೇಯಿಂಗ್‌ XIನ ಅಗ್ರ ಸ್ಥಾನದಲ್ಲಿ ಬದಲಾವಣೆಯನ್ನು ನಾವು ನಿರೀಕ್ಷೆ ಮಾಡಬಹುದು. ಅಭಿಷೇಕ್‌ ಶರ್ಮಾ ಸದ್ಯ ನಂ 1 ಬ್ಯಾಟ್ಸ್‌ಮನ್‌ ಆಗಿರುವ ಕಾರಣ, ಬಹುಶಃ ಸಂಜು ಅವರ ಸ್ಥಾನದಲ್ಲಿ ಬದಲಾವಣೆಯನ್ನು ನಿರೀಕ್ಷೆ ಮಾಡಬಹುದು.

30ರ ಪ್ರಾಯದ ವಿಕೆಟ್‌ ಕೀಪರ್‌ ಸಂಜು ಸ್ಯಾಮ್ಸನ್‌ ಅವರು ಜಿತೇಶ್‌ ಶರ್ಮಾ ಅವರ ನಡುವೆ ಪೈಪೋಟಿ ಎದುರಿಸಲಿದ್ದಾರೆ. ಒಂದು ವೇಳೆ ಗಿಲ್‌ ಬಂದಿಲ್ಲವಾಗಿದ್ದರೆ, ಸಂಜು ನೇರವಾಗಿ ಓಪನರ್‌ ಆಗಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳುತ್ತಿದ್ದರು. ಆದರೆ, ಗಿಲ್‌ ಆಗಮನದಿಂದ ಸಂಜು ಸ್ಯಾಮ್ಸನ್‌ ಅವರ ಆರಂಭಿಕ ಸ್ಥಾನದ ಮೇಲೆ ಪರಿಣಾಮ ಬೀರಿದೆ. ಇದೀಗ ಸಂಜು ಸ್ಯಾಮ್ಸನ್‌ ವಿಕೆಟ್‌ ಕೀಪರ್‌ ಆಗಿ ಆಡಿದರೆ, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಅವಕಾಶ ಸಿಗವಹುದು. ಆದರೆ, ಜಿತೇಶ್‌ ಶರ್ಮಾ ಮ್ಯಾಚ್‌ ಪಿನಿಷರ್ ಆಗಿ ಉತ್ತಮವಾಗಿದ್ದಾರೆ. ಅವರು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಮ್ಯಾಚ್‌ ಫಿನಿಷರ್‌ ಆಗಿ ಸಕ್ಸಸ್‌ ಆಗಿದ್ದರು. ಈ ಹಿನ್ನೆಲೆಯಲ್ಲಿ ಜಿತೇಶ್‌ ಶರ್ಮಾ, ಮಧ್ಯಮ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್‌ಗೆ ಕಠಿಣ ಪೈಪೋಟಿ ನೀಡಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!