ಉದಯವಾಹಿನಿ,ಬಾಗಲಕೋಟೆ : ಭಾನುವಾರ ಬೆಳಗಾವಿಯಲ್ಲಷ್ಟೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನಡುವೆ ಪರೋಕ್ಷ ವಾಕ್ಸಮರ ನಡೆದಿತ್ತು. ಅದರ ಮುಂದುವರಿದ ಭಾಗವಂತೆ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮುರುಗೇಶ್ ನಿರಾಣಿ ನಡುವೆ ಸೋಮವಾರ ಬಾಗಲಕೋಟೆಯಲ್ಲಿ ವಾಕ್ಸಮರ ನಡೆದಿದೆ. ಕಾರ್ಯಕರ್ತರ ಸಭೆಯಲ್ಲಿ ಉಭಯ ನಾಯಕರು ಪರಸ್ಪರ ಹೆಸರೇಳದೇ ವಾಗ್ದಾಳಿ ನಡೆಸಿದ್ದಾರೆ. ಬಾಗಲಕೋಟೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನನ್ನ ಸೋಲಿಸಲು ಎಷ್ಟೋ ಜನ ಮುಂದಾದರು. ಗೌಡನನ್ನು ಸೋಲಿಸ್ತೀವಿ ಎಂದವರು ಏನಾದ್ರೂ ನಿಮಗೆ ಗೊತ್ತಾಗಿದೆ. ತಪ್ಪುಗಳು ಆಗೋದು ಸಹಜ, ನಾನು ಸಹ ಸೋತಿದ್ದೇನೆ. 20 ವರ್ಷ ನಾನು ಇರೋದೆ ಎಂದು ಹೇಳಿದರು.
