ಉದಯವಾಹಿನಿ, ನವದೆಹಲಿ: ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್‌ಗೆ ದೆಹಲಿಯ (Delhi) ಲುಟಿಯನ್ಸ್ ವಲಯದ 34 ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿ ಟೈಪ್ VIII ಬಂಗಲೆಯನ್ನು ಮಂಜೂರು ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಧನಕರ್ ತಮ್ಮ ಅಧಿಕೃತ ನಿವಾಸದಿಂದ ಹೊರಗೆ ಸ್ಥಳಾಂತರಗೊಂಡ ಕೆಲವೇ ದಿನಗಳಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.ಧನಕರ್ ತಮ್ಮ ಉಪರಾಷ್ಟ್ರಪತಿ ಸ್ಥಾನಕ್ಕೆ ಜುಲೈ 21, ರಂದು ರಾಜೀನಾಮೆ ನೀಡಿದ ನಂತರ, ಸಂಪ್ರದಾಯದಂತೆ ಸರ್ಕಾರಿ ವಸತಿಯನ್ನು ಮಂಜೂರು ಮಾಡದೆ, INLD ನಾಯಕ ಅಭಯ್ ಚೌತಾಲರ ಫಾರ್ಮ್‌ಹೌಸ್‌ಗೆ ತೆರಳಿದ್ದರು. ಈಗ ಮಂಜೂರಾದ ಬಂಗಲೆಯನ್ನು ಈ ಹಿಂದೆ ಮಿಜೋರಾಂನ ಗವರ್ನರ್ ಮತ್ತು ಕೇಂದ್ರ ರಾಜ್ಯ ಸಚಿವರಾಗಿದ್ದ ವಿ.ಕೆ. ಸಿಂಗ್ ಆಕ್ರಮಿಸಿಕೊಂಡಿದ್ದರು. ಆದರೆ, ಕೇಂದ್ರ ವಸತಿ ಮತ್ತು ನಗರ ವ್ಯವಹಾರ ಸಚಿವಾಲಯವು ಈ ಮಂಜೂರಾತಿಯ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ.
ಧನಕರ್, ಆರೋಗ್ಯ ಕಾರಣಗಳಿಂದ ಸಂಸತ್‌ನ ಮಾನ್ಸೂನ್ ಅಧಿವೇಶನದ ಮೊದಲ ದಿನವೇ ರಾಜೀನಾಮೆ ಸಲ್ಲಿಸಿದ್ದರು. ಇದು ದೇಶದ ಇತಿಹಾಸದಲ್ಲಿ ಉಪರಾಷ್ಟ್ರಪತಿಯಾಗಿ ಅವಧಿ ಪೂರ್ಣಗೊಳಿಸದೆ ರಾಜೀನಾಮೆ ನೀಡಿದ ಮೂರನೇ ಘಟನೆಯಾಗಿದೆ. ರಾಜೀನಾಮೆಯ ನಂತರ ಧನಕರ್ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರವುಳಿದಿದ್ದಾರೆ. ವಿರೋಧ ಪಕ್ಷದ ನಾಯಕರು, ರಾಜಕೀಯ ವಿಭಿನ್ನತೆಯಿಂದ ಧನಕರ್ ಅವರರಿಗೆ ರಾಜೀನಾಮೆ ನೀಡುವಂತೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!