ಉದಯವಾಹಿನಿ, ಭೋಪಾಲ್‌: ಮಧ್ಯ ಪ್ರದೇಶದ ಜಿಲ್ಲೆಯ ವೀರಪುರ ಡ್ಯಾಮ್‌ನಲ್ಲಿ ಒಬ್ಬ ವ್ಯಕ್ತಿಯು ಮುಳುಗಿ ಮೃತಪಟ್ಟಿದ್ದಾನೆಂದು ಕರೆ ಬಂದ ಹಿನ್ನೆಲೆ ಪೊಲೀಸರು ಬಂದಾಗ ಆತ ಎದ್ದು ನಡೆದುಕೊಂಡು ಹೋದ ಘಟನೆ ನಡೆದಿದೆ. ಆ ವ್ಯಕ್ತಿ ಇನ್‌ಸ್ಟಾಗ್ರಾಮ್ ರೀಲ್‌ಗಾಗಿ ಇಂತಾ ನಾಟಕವಾಡಿರುವುದು ಗೊತ್ತಾಗಿದೆ. ಈ ಘಟನೆಯು ಸ್ಥಳೀಯರಲ್ಲಿ ಗೊಂದಲವನ್ನುಂಟು ಮಾಡಿ, ತುರ್ತು ಸೇವೆಗಳ ದುರ್ಬಳಕೆ ಮಾಡಿಕೊಳ್ಳುವುದಲ್ಲೆ ಅಧಿಕಾರಿಗಳ ಸಮಯವನ್ನು ವ್ಯರ್ಥ ಆಗುವಂತೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.ವೀರಪುರ ಡ್ಯಾಮ್‌ನಲ್ಲಿ ಒಬ್ಬ ವ್ಯಕ್ತಿಯು ನೀರಿನಲ್ಲಿ ತೇಲುತ್ತಿರುವುದನ್ನು ಕಂಡ ಸ್ಥಳೀಯರು, ಆತ ಮುಳುಗಿರುವನೆಂದು ಭಾವಿಸಿ ಗಾಬರಿಗೊಂಡರು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸ್ ತಂಡವು ಶವವನ್ನು ಹೊರತೆಗೆಯಲು ತೆರಳಿತು. ಆದರೆ ಅವರು ಕಾರ್ಯಪ್ರವೃತ್ತರಾಗುವ ಮೊದಲೇ, “ಮೃತ” ಎಂದು ಭಾವಿಸಲಾದ ವ್ಯಕ್ತಿಯು ಏಕಾಏಕಿ ಎದ್ದು ನಡೆದುಹೋದನು. ಈ ದೃಶ್ಯವು ಅಲ್ಲಿ ನೆರೆದಿದ್ದ ಜನರನ್ನು ಆಶ್ಚರ್ಯಗೊಳ್ಳುವಂತೆ ಮಾಡಿದ್ದು,. ಆತ ಇನ್‌ಸ್ಟಾಗ್ರಾಮ್ ರೀಲ್ ಮಾಡುವುದಕ್ಕಾಗಿ ಈ ನಾಟಕವಾಡಿದ್ದಾನೆ ಎಂದು ನಂತರ ತಿಳಿದುಬಂದಿದೆ.
ಈ ಘಟನೆಯು ತುರ್ತು ಸೇವೆಗಳ ಸಮಯವನ್ನು ವ್ಯರ್ಥಗೊಳಿಸಿದ್ದು ಮಾತ್ರವಲ್ಲ, ಸ್ಥಳೀಯರಲ್ಲಿ ಗೊಂದಲವನ್ನುಂಟು ಮಾಡಿತು ಎಂದು ವರದಿಯಾಗಿದೆ. ಪೊಲೀಸರು ಇಂತಹ ಅಪಾಯಕಾರಿ ಸಾಮಾಜಿಕ ಮಾಧ್ಯಮ ಕೃತ್ಯಗಳ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಪ್ರತಿಕ್ರಿಯೆಗಳು ಬಂದಿವೆ. ಒಬ್ಬ ಬಳಕೆದಾರ, “ಇನ್‌ಸ್ಟಾಗ್ರಾಮ್ ರೀಲ್ ಜೀವಕ್ಕಿಂತ ಮುಖ್ಯವಾಯಿತು” ಎಂದು ವ್ಯಂಗ್ಯವಾಡಿದರೆ, ಇನ್ನೊಬ್ಬರು, “ಇದು ಮುಂದಿನ ಹಂತದ ಈಜು ಕೌಶಲ್ಯ” ಎಂದು ಕಾಮೆಂಟ್ ಮಾಡಿದ್ದಾರೆ. ಮೂರನೇ ಬಳಕೆದಾರ, “ಕೊಳಕು ನೀರಿನಲ್ಲಿ ಇಂತಹ ಕೃತ್ಯ ಏಕೆ? ಬಹುಶಃ ಕೌಟುಂಬಿಕ ಸಮಸ್ಯೆಯಿರಬಹುದು” ಎಂದು ಊಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!