ಉದಯವಾಹಿನಿ, ನವದೆಹಲಿ: ಸಿನಿಮಾ ಇಂಡಸ್ಟ್ರಿಯಲ್ಲಿ ಯಶಸ್ಸು ಪಡೆದಂತೆ ನಟ, ನಟಿಯರು ಮಾತ್ರವಲ್ಲದೆ ನಿರ್ದೇಶಕರಿಗೂ ಬಹು ಬೇಡಿಕೆ ಬರುತ್ತದೆ. ಅದರಲ್ಲೂ ಒಂದು ಉತ್ತಮ ಕಥೆಯನ್ನು ಪ್ರೇಕ್ಷಕರ ಮನ ತಲುಪುವಂತೆ ಮಾಡಲು ನಿರ್ದೇಶರ ಪರಿಶ್ರಮ ಬಹಳ ಮುಖ್ಯ ಪಾತ್ರವಹಿಸಲಿದೆ. ಇದರಿಂದಾಗಿ ಪರಭಾಷೆಯಲ್ಲೂ ಕೂಡ ಅದೇ ನಿರ್ದೇಶಕರಿಗೆ ಬೇಡಿಕೆ ಇರುವ ಸಾಧ್ಯತೆ ಸಹ ಇದೆ. ಈ ನಿಟ್ಟಿನಲ್ಲಿ ಸ್ಯಾಂಡಲ್ ವುಡ್ ನ ಉಗ್ರಂ, ಕೆಜಿಎಫ್ ಸಿನಿಮಾ ಖ್ಯಾತಿಯ ಪ್ರಶಾಂತ್ ನೀಲ್ ಹಾಗೂ ಭಜರಂಗಿ, ವಜ್ರಕಾಯ ಚಿತ್ರದ ಹರ್ಷ ಅವರನ್ನು ಕಾಣಬಹುದು. ಇದೀಗ ಇವರ ಸಾಲಿಗೆ ಸ್ಯಾಂಡಲ್ ವುಡ್ ಸಿನಿಮಾ ಇಂಡಸ್ಟ್ರಿಯ ಖ್ಯಾತ ನಟ ನಂದ ಕಿಶೋರ್ (Nanda Kishore) ಅವರು ಕೂಡ ಸೇರಲಿ ದ್ದಾರೆ. ಮಲಯಾಳಂ ನ ಹೆಸರಾಂತ ನಟ ಮೋಹನ್ ಲಾಲ್ ಅವರೊಂದಿಗೆ ನಿರ್ದೇಶಕ ನಂದ ಕಿಶೋರ್ ಅವರು ವೃಷಭ ಸಿನಿಮಾ ಮಾಡಲಿದ್ದಾರೆ. ಇದಾದ ಬಳಿಕ ಸೂಪರ್ ಸ್ಟಾರ್ ರಜನೀಕಾಂತ್ ಅವರ ಹೊಸ ಸಿನಿಮಾಕ್ಕೆ ನಟ ನಂದ ಕಿಶೋರ್ ಅವರು ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ಸುದ್ದಿ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ವಿಕ್ಟರಿ, ಅಧ್ಯಕ್ಷ, ಪೊಗರು, ರಾಣಾ ಸಿನಿಮಾಗಳ ಮೂಲಕ ಖ್ಯಾತಿ ಪಡೆದ ನಿರ್ದೇಶಕ ನಂದ ಕಿಶೋರ್ ಮಾಲಿವುಡ್ ಕಡೆ ಮುಖ ಮಾಡಿದ್ದರು ಎಂಬ ಸುದ್ದಿ ಇತ್ತೀಚೆಗಷ್ಟೆ ವೈರಲ್ ಆಗಿತ್ತು. ಮೋಹನ್ ಲಾಲ್ ಅವರ ವೃಷಭ ಸಿನಿಮಾದ ಶೂಟಿಂಗ್ ಕೆಲಸ ಕಾರ್ಯ ಆದಷ್ಟು ಬೇಗ ಪೂರ್ಣವಾದರೆ ಇದೇ ಅಕ್ಟೋಬರ್ 16ಕ್ಕೆ ಈ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ. ಇದಾದ ಬಳಿಕ ನಟ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಹೊಸ ಚಿತ್ರಕ್ಕೆ ನಂದ ಕಿಶೋರ್ ಅವರು ನಿರ್ದೇಶನ ಮಾಡಲಿ ದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ.
ರಜನಿಕಾಂತ್ ಜೊತೆ ನಂದ ಕಿಶೋರ್ ಅವರು ಹೊಸ ಸಿನಿಮಾ ಮಾಡಲಿದ್ದು ಈಗಾಗಲೇ ಈ ಸಿನಿಮಾದ ಕಥೆ ಕೂಡ ಓಕೆ ಮಾಡಿದ್ದಾರೆ. ಹೊಸ ಹೊಸ ಕಥೆಗಳನ್ನು ಕೇಳುತ್ತಿದ್ದಾರೆ. ‘ಕೂಲಿ’ ‘ಜೈಲರ್-2’ ಚಿತ್ರದಲ್ಲಿ ನಟಿಸಿದ್ದ ಬಳಿಕ ನಟ ರಜನೀಕಾಂತ್ ಅವರು ತಲೈವಾ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಸದ್ಯ ಚೆನ್ನೈನಲ್ಲಿ ಈ ಸಿನಿಮಾದ ಚಿತ್ರೀಕರಣ ಕೂಡ ನಡೀತಿದೆ. ಇದೇ ಸಿನಿಮಾದಲ್ಲಿ ನರಸಿಂಹ ಆಗಿ ಶಿವರಾಜ್‌ಕುಮಾರ್ ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳ ಲಿದ್ದಾರೆ. ಇದಾದ ಬಳಿಕ ನಂದ ಕಿಶೋರ್ ಅವರ ಜೊತೆ ಹೊಸ ಸಿನಿಮಾವನ್ನು ನಟ ರಜನೀಕಾಂತ್ ಅವರು ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!