ಉದಯವಾಹಿನಿ, ಮುದೇಗೌಡ್ರು ನವೀನ್ ಕುಮಾರ್ ಆರ್.ಓ ಹಾಗೂ ತೆಲಿಗಿ ಮಲ್ಲಿಕಾರ್ಜುನಪ್ಪ ಅವರು ಚೊಚ್ಚಲ ಬಾರಿಗೆ ನಿರ್ಮಿಸಿರುವ, ನಾಗರಾಜ್ ಶಂಕರ್ ನಿರ್ದೇಶನದಲ್ಲಿ ಅರ್ಜುನ್ ವೇದಾಂತ್ ನಾಯಕರಾಗಿ ನಟಿಸಿರುವ `ಮರಳಿ ಮನಸಾಗಿದೆ’ ಚಿತ್ರದ ಹಾಡು ಬಿಡುಗಡೆ ಆಗಿದೆ. ಸಾಹಿತಿ ಕೆ.ಕಲ್ಯಾಣ್ ಅವರು ಬರೆದಿರುವ ಓಡುವ ನದಿಗೆ ಎಂಬ ಹಾಡನ್ನು ಜನಪ್ರಿಯ ನಟಿ ಪ್ರೇಮ ಬಿಡುಗಡೆ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದಾರೆ.
ಅನುರಾಧ ಭಟ್ ಅವರು ಈ ಸಮಧುರ ಗೀತೆಯನ್ನು ಹಾಡಿದ್ದು, ವಿನು ಮನಸು ಸಂಗೀತ ನೀಡಿದ್ದಾರೆ. ಇದು ಚಿತ್ರದ ನಾಲ್ಕನೇ ಹಾಗೂ ಕೊನೆಯ ಹಾಡಾಗಿದೆ. ಈವರೆಗೂ ಬಿಡುಗಡೆಯಾಗಿರುವ ಚಿತ್ರದ ಮೂರು ಹಾಡುಗಳು ಕೂಡ ಜನಮನಸೂರೆಗೊಂಡಿದೆ. ಈ ಹಾಡಿಗೂ ಸಹ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
