ಉದಯವಾಹಿನಿ, ಇತ್ತೀಚೆಗಷ್ಟೇ ಘಾಟಿ ಸಿನಿಮಾದ ಮೂಲಕ ಸೌಂಡ್ ಮಾಡಿದ್ದ ಅನುಷ್ಕಾ ಶೆಟ್ಟಿ ಇದೀಗ ಸೋಶಿಯಲ್ ಮೀಡಿಯಾ ಫಾಲೋವರ್ಸ್‍ಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಿಂದ ದೂರಾಗುವ ಬಗ್ಗೆ ಹ್ಯಾಂಡ್‍ರೈಟ್ ಲೆಟರ್ ಬರೆದಿದ್ದು, ಕಾರಣ ಏನು ಅನ್ನೋದನ್ನೂ ಅವರೇ ಹಂಚಿಕೊಂಡಿದ್ದಾರೆ.
ಬೇರೆ ನಟಿಯರಿಗೆ ಹೋಲಿಸಿದರೆ ಅನುಷ್ಕಾ ಶೆಟ್ಟಿ ಸೋಶಿಯಲ್ ಮೀಡಿಯಾಗಳಿಂದ ಅಂತರ ಕಾಯ್ದುಕೊಂಡೇ ಬಂದವರು. ಸಿನಿಮಾಗೆ ಸಂಬಂಧಪಟ್ಟ ಮಾಹಿತಿಯನ್ನಷ್ಟೇ ಆಗಾಗ ಹಂಚಿಕೊಳ್ಳುತ್ತಿದ್ದರು. ವೈಯಕ್ತಿಕ ಪೋಸ್ಟ್ ಹಾಕುವುದು ವಿರಳಾತಿವಿರಳ. ಇದೀಗ ಸೋಶಿಯಲ್ ಮೀಡಿಯಾದಿಂದ ದೂರಾಗುವ ಕುರಿತು ಮಾಹಿತಿ ಹಂಚಿಕೊಂಡಿರುವ ಅನುಷ್ಕಾ “ಸೋಶಿಯಲ್ ಮೀಡಿಯಾದಿಂದ ಸ್ವಲ್ಪ ದೂರ ಸರಿಯುತ್ತಿದ್ದೇನೆ. ಮೊಬೈಲ್ ಸ್ಕ್ರೋಲಿಂಗ್ ಹೊರತಾಗಿಯೂ ಜಗತ್ತಿನ ಜೊತೆ ಸಂಪರ್ಕ ಸಾಧಿಸಬೇಕಾಗಿದೆ.” ಶೀಘ್ರದಲ್ಲೇ ಮತ್ತೆ ನಿಮ್ಮೊಂದಿಗೆ ಸೇರಿಕೊಳ್ಳುತ್ತೇನೆ ಎಂದು ಬರೆದಿದ್ದಾರೆ.
