ಉದಯವಾಹಿನಿ, ನವದೆಹಲಿ:  ಅಮೇರಿಕಾ ಮೂಲದ ಹೂಡಿಕೆ ಸಂಸ್ಥೆ ಜಿಕ್ಯುಜಿ ಪಾರ್ಟರ್ಸ್ ಹಾಗೂ ಇತರ ಹೂಡಿಕೆದಾರರು ಅದಾನಿ ಸಮೂಹದ 2 ಸಂಸ್ಥೆಗಳಲ್ಲಿ 1 ಬಿಲಿಯನ್ ಡಾಲರ್ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಅದಾನಿ ಸಮೂಹದ ಎರಡು ಸಂಸ್ಥೆಗಳಲ್ಲಿ ಬೃಹತ್ ಬ್ಲಾಕ್ ಟ್ರೇಡ್ ಗಳ ಮೂಲಕ ಅಮೇರಿಕನ್ ಸಂಸ್ಥೆಗಳು ಷೇರು ಖರೀದಿಸಿದೆ. ಸಮೂಹದ ಪ್ರಮುಖ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಒಂದೇ ಬ್ಲಾಕ್‌ನಲ್ಲಿ 18 ಮಿಲಿಯನ್ ಷೇರುಗಳನ್ನು ಅಥವಾ ಶೇಕಡಾ 1.6 ರಷ್ಟು ವ್ಯಾಪಾರವನ್ನು ಕಂಡಿದೆ ಆದರೆ ನವೀಕರಿಸಬಹುದಾದ ಇಂಧನ ಸಂಸ್ಥೆ ಅದಾನಿ ಗ್ರೀನ್ ಎನರ್ಜಿ ಒಟ್ಟು 35.2 ಮಿಲಿಯನ್ ಷೇರುಗಳನ್ನು ಅಥವಾ ಶೇಕಡಾ 2.2 ರಷ್ಟು ಕೈ ಬದಲಾಯಿಸಿದೆ ಎಂದು ವಿಷಯದ ಬಗ್ಗೆ ಮಾಹಿತಿ ಇರುವ ಮೂಲಗಳು ತಿಳಿಸಿವೆ. ಜಿಕ್ಯುಜಿ ಸಂಸ್ಥೆ ಮಾರ್ಚ್‌ನಲ್ಲಿ 1.87 ಶತಕೋಟಿ ಡಾಲರ್ ಮೌಲ್ಯದ ಷೇರುಗಳನ್ನು ಖರೀದಿಸಿತ್ತು. ಇದನ್ನು ಮೇ ತಿಂಗಳಲ್ಲಿ $400-500 ಮಿಲಿಯನ್ ಗಳಷ್ಟು ಹೆಚ್ಚಿಸಿದೆ. ಅದಾನಿ ಕುಟುಂಬ ಬ್ಲಾಕ್ ಡೀಲ್ ಮೂಲಕ ಷೇರುಗಳನ್ನು ಮಾರಾಟ ಮಾಡಿತ್ತು ಎಂದು ಸಂಸ್ಥೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!