ಉದಯವಾಹಿನಿ,ಮುಂಬೈ: ಅಮೆರಿಕ ಮತ್ತು ಯುರೋಪಿಯನ್ ಮಾರುಕಟ್ಟೆಗಳಲ್ಲಿನ ಗಳಿಕೆಯ ಆವೇಗ ಮತ್ತು ತಾಜಾ ವಿದೇಶಿ ನಿಧಿಯ ಒಳಹರಿವಿನ ನಡುವೆ ಸೆನ್ಸೆಕ್ಸ್ ದಾಖಲೆಯ 64,000 ಮಟ್ಟ ಮತ್ತು ನಿಫ್ಟಿ 50 ಸೂಚ್ಯಂಕ 19,000 ಮಟ್ಟವನ್ನು ದಾಟಿದೆ. ಈ ಮೂಲಕ ಬೆಂಚ್‌ಮಾರ್ಕ್ ಈಕ್ವಿಟಿ ಸೂಚ್ಯಂಕಗಳು ಬುಧವಾರ ಸಾರ್ವಕಾಲಿಕ ದಾಖಲೆಯ ಮಟ್ಟವನ್ನು ತಲುಪಿವೆ. ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನಂತಹ ಮಾರುಕಟ್ಟೆಯ ದೈತ್ಯ ಷೇರುಗಳಲ್ಲಿ ಕಂಡು ಬಂದ ಖರೀದಿಯ ಆಸಕ್ತಿ ಕೂಡ ಈ ಆವೇಗಕ್ಕೆ ನೆರವಾಯಿತು.
ತನ್ನ ಹಿಂದಿನ ದಿನದ ಆವೇಗವನ್ನು ವಿಸ್ತರಿಸಿದ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 621.07 ಅಂಕ ಜಿಗಿದು ಮಧ್ಯಾಹ್ನದ ವಹಿವಾಟಿನ ಸಮಯದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ 64,037.10 ಅನ್ನು ತಲುಪಿತ್ತು. ಎನ್‌ಎಸ್‌ಇ ನಿಫ್ಟಿ 50ಯು 193.85 ಅಂಕಗಳ ಏರಿಕೆಯೊಂದಿಗೆ ತನ್ನ ಜೀವಿತಾವಧಿಯ ಗರಿಷ್ಠ ಮಟ್ಟ 19,011.25 ಅನ್ನು ಮುಟ್ಟಿತ್ತು. “ನಿಫ್ಟಿ 50ಯು ಜೂನ್ 28 ರಂದು ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಸಾಧಿಸಿದೆ. ಸಾಂಸ್ಥಿಕ ಸಂಸ್ಥೆಗಳು ಮತ್ತು ಚಿಲ್ಲರೆ/ಎಚ್‌ಎನ್‌ಐ ವಿಭಾಗಗಳಿಂದ ಕಂಡು ಬಂದ ಖರೀದಿ ಆಸಕ್ತಿಯೇ ಇದಕ್ಕೆ ಕಾರಣ. ಅಮೆರಿಕ ಆರ್ಥಿಕ ದತ್ತಾಂಶದಲ್ಲಿ ಸುಧಾರಣೆ, ಮತ್ತು ತಾಜಾ ಉತ್ತೇಜಕ ಕ್ರಮಗಳ ಕುರಿತು ಚೀನಾ ನೀಡಿರುವ ಸುಳಿವು ಹೂಡಿಕೆದಾರರ ಭಾವನೆಗಳನ್ನು ಸುಧಾರಿಸಲು ಸಹಾಯ ಮಾಡಿದೆ,” ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಲಿಮಿಟೆಡ್‌ನ ಎಂಡಿ ಮತ್ತು ಸಿಇಒ ಧೀರಜ್ ತಿಳಿಸಿದ್ದಾರೆ.
