ಉದಯವಾಹಿನಿ, ಜ್ವಾಲಾ ಗುಟ್ಟಾ ಭಾರತದ ಬ್ಯಾಡ್ಮಿಂಟನ್ ಲೋಕದ ಧ್ರುವತಾರೆ. ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಢಿಸಿದ್ದಾರೆ. ಈಗ ಮತ್ತೊಂದು ಮಾನವೀಯ ಕಾರ್ಯದ ಮೂಲಕ ಜನರ ಮೆಚ್ಚುಗೆ ಗಳಿಸಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಜ್ವಾಲಾ ಗುಟ್ಟಾ ಮಗುವಿಗೆ ತಾಯಿಯಾಗಿದ್ದರು. ಮಗುವಿನ ನಾಮಕರಣಕ್ಕೆ ಬಾಲಿವುಡ್ ನಟ ಅಮೀರ್ ಖಾನ್ ಹೈದರಾಬಾದ್‌ಗೆ ಬಂದಿದ್ದರು. ನಟ ವಿಷ್ಣು ವಿಶಾಲ್ ಅವರನ್ನು ವಿವಾಹವಾಗಿದ್ದಾರೆ.
ಜ್ವಾಲಾ ಗುಟ್ಟಾ ತಮ್ಮ ಎದೆಹಾಲು ಅನ್ನು ನವಜಾತಶಿಶುಗಳು, ಗಂಭೀರ ಸ್ಥಿತಿಯಲ್ಲಿರುವ ನವಜಾತ ಶಿಶುಗಳಿಗೆ ನೀಡಿದ್ದಾರೆ. ಜೊತೆಗೆ ಅವಧಿಗೂ ಮುನ್ನವೇ ಹುಟ್ಟಿದ ಶಿಶುಗಳಿಗೆ ತಮ್ಮ ಎದೆ ಹಾಲು ನೀಡಿದ್ದಾರೆ. ಜ್ವಾಲಾ ಗುಟ್ಟಾ ಇದುವರೆಗೂ 30 ಲೀಟರ್ ಎದೆ ಹಾಲು ಅನ್ನು ನವಜಾತ ಶಿಶುಗಳಿಗೆ ಹಾಗೂ ಅಗತ್ಯವಿರುವ ಶಿಶುಗಳಿಗೆ ನೀಡಿದ್ದಾರೆ.
ಎದೆ ಹಾಲು, ಜೀವವನ್ನು ಉಳಿಸುತ್ತೆ. ದಾನಿಗಳ ಎದೆ ಹಾಲು ಲೈಫ್ ಚೇಜಿಂಗ್ ಆಗಬಹುದು. ನೀವು ಎದೆ ಹಾಲು ಅನ್ನು ಡೋನೇಟ್ ಮಾಡಿದರೇ, ಅಗತ್ಯ ಇರುವವರ ಪಾಲಿಗೆ ನೀವು ಹೀರೋಗಳಾಗುತ್ತೀರಿ ಎಂದು ಜ್ವಾಲಾ ಗುಟ್ಟಾ ಟ್ವೀಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.
ಜ್ವಾಲಾ ಗುಟ್ಟಾ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ನವಜಾತ ಶಿಶುಗಳಿಗೆ ಎದೆ ಹಾಲು ಅನ್ನು ದಾನವಾಗಿ ನೀಡಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ಜ್ವಾಲಾ ಗುಟ್ಟಾ ಶಿಶುಗಳಿಗೆ ತಮ್ಮ ಎದೆ ಹಾಲು ಅನ್ನು ದಾನವಾಗಿ ನೀಡುತ್ತಿದ್ದಾರೆ. ತಾಯಿ ಇಲ್ಲದ ಅನಾಥ ಶಿಶುಗಳಿಗೆ ಎದೆ ಹಾಲು ಅನ್ನು ನೀಡಿ ಜ್ವಾಲಾ ಗುಟ್ಟಾ ಅನಾಥ ಶಿಶುಗಳ ಪಾಲಿಗೆ ತಾಯಿಯಾಗಿದ್ದಾರೆ.
ಜ್ವಾಲಾ ಗುಟ್ಟಾ ಅವರ ಉದಾತ್ತ ಕಾರ್ಯಕ್ಕೆ ಜನರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜ್ವಾಲಾ ಗುಟ್ಟಾ, ಬಹಳಷ್ಟು ಮಕ್ಕಳಿಗೆ ತಾಯಿಯಾಗಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಜನರು ಕೊಂಡಾಡುತ್ತಿದ್ದಾರೆ.
