ಉದಯವಾಹಿನಿ,ಮೋಲಿವುಡ್: ಮಲಯಾಳಂ ಚಿತ್ರರಂಗ ತನ್ನ ಕಲಾವಿದರಿಗೆ ಡಿಜಿಟಲ್ ಗುರುತಿನ ಚೀಟಿ ವಿತರಿಸಿದ್ದು ಬ್ಯಾಂಕಿಂಗ್, ವಿಮೆ ಇನ್ನಿತರೆ ಸೌಲಭ್ಯಗಳು ಸುಲಭಕ್ಕೆ ಲಭ್ಯವಾಗುವಂತೆ ಮಾಡಿದೆ. ಎಲ್ಲ ಚಿತ್ರರಂಗಗಳಲ್ಲಿಯೂ ಅಲ್ಲಿನ ಕಲಾವಿದರು, ತಂತ್ರಜ್ಞರು ಸೇರಿಕೊಂಡು ಸಂಘಗಳನ್ನು ಕಟ್ಟಿಕೊಂಡು ಅದಕ್ಕೆ ನಿಯಮಗಳನ್ನು ರೂಪಿಸಿ ಒಗ್ಗಟ್ಟಿನಿಂದ ಒಬ್ಬರಿಗೊಬ್ಬರು ಆಗುತ್ತಾ ಕಲಾವಿದರ ಸುಖ, ನೆಮ್ಮದಿಗೆ ಬೇಕಾದ ಅಗತ್ಯ ಸೌಲಭ್ಯಗಳು, ನಿವೃತ್ತಿ ಭತ್ಯೆಗಳ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ. ಅದರಲ್ಲಿಯೂ ದಕ್ಷಿಣ ಭಾರತದ ಚಿತ್ರರಂಗಗಳಲ್ಲಿ ಈ ಕಲಾವಿದರ ಸಂಘಗಳು ಹೆಚ್ಚು ಪರಿಣಾಮಕಾರಿಯಾಗಿಯೂ ಶಿಸ್ತಿನಿಂದಲೂ ಕಾರ್ಯಾಚರಣೆ ಮಾಡುತ್ತಿವೆ.
ದಕ್ಷಿಣದ ಪ್ರಮುಖ ನಾಲ್ಕು ಚಿತ್ರರಂಗಗಳಲ್ಲಿಯೂ ಕಲಾವಿದರ ಸಂಘಗಳಿವೆ, ಅದರಲ್ಲಿಯೂ ಮಲಯಾಳಂ ಚಿತ್ರರಂಗ ಒಂದು ಹೆಜ್ಜೆ ಮುಂದೆ ಹೋಗಿ ಸಂಘಕ್ಕೆ ಡಿಜಿಟಲ್ ಟಚ್ ತನ್ನ ಸದಸ್ಯರಿಗೆ ಸವಲತ್ತುಗಳ ಲಭ್ಯತೆಯನ್ನು ಸುಲಭಗೊಳಿಸಿದೆ. ಅಸೋಸಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ ತನ್ನ ಸದಸ್ಯರಿಗೆ ಹೊಸ ಡಿಜಿಟಲ್ ಗುರುತಿನ ಚೀಟಿಗಳನ್ನು ವಿತರಿಸಿದೆ. ಹಲವು ಸೌಲಭ್ಯಗಳನ್ನು ಈ ಡಿಜಿಟಲ್ ಕಾರ್ಡ್ಗೆ ಲಿಂಕ್ ಮಾಡಲಾಗಿದ್ದು, ಮೊತ್ತ ಮೊದಲ ಡಿಜಿಟಲ್ ಗುರುತಿನ ಚೀಟಿಯನ್ನು ಅಮ್ಮಾದ ಅಧ್ಯಕ್ಷ ಮೋಹನ್ಲಾಲ್ ಅವರು ಮಲಯಾಳಂ ಚಿತ್ರರಂಗದ ಮತ್ತೊಬ್ಬ ದಿಗ್ಗಜ ನಟ, ಅಮ್ಮಾದ ಸದಸ್ಯ ಮಮ್ಮುಟಿಗೆ ನೀಡುವ ಮೂಲಕ ಡಿಜಿಟಲ್ ಗುರುತಿನ ಚೀಟಿ ವಿತರಣೆಗೆ ಚಾಲನೆ ನೀಡಿದ್ದಾರೆ.
