ಉದಯವಾಹಿನಿ, ದಾವಣಗೆರೆ: ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ , ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರು ಚನ್ನಗಿರಿಯ ಮರಡಿ ಗ್ರಾಮಕ್ಕೆ ಬುಧವಾರ ಭೇಟಿ ನೀಡಲಿದ್ದಾರೆ. ಈ ವೇಳೆ 30 ಕಿ.ಮೀ ಬೈಕ್ ಹಾಗೂ ಕಾರು ರ‍್ಯಾಲಿ ನಡೆಯಲಿದೆ. ಬೈಕ್ , ಕಾರಿನ ಎದುರಿಗೆ ಜೆಸಿಬಿ ಓಡಿಸಲು ನಿರ್ಧರಿಸಲಾಗಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಮರಡಿ ಗ್ರಾಮದಲ್ಲಿ ಮಹಾಗಣಪತಿ ಮಹೋತ್ಸವ ಮತ್ತು ಧರ್ಮ ಜಾಗೃತಿ ಸಭೆ ಹಿನ್ನೆಲೆ ಯತ್ನಾಳ್ ಹಾಗೂ ಈಶ್ವರಪ್ಪ ಆಗಮಿಸಲಿದ್ದಾರೆ. ಶ್ರೀಬಸವೇಶ್ವರ ವಿನಾಯಕ ಗೆಳೆಯರ ಬಳಗ ಪ್ರತಿಷ್ಠಾಪಿತ ಮಹಾಗಣಪತಿ ಮಹೋತ್ಸವದಲ್ಲಿ ಧರ್ಮ ಜಾಗೃತಿ ಸಭೆ ಆಯೋಜಿಸಲಾಗಿದೆ. ದಾವಣಗೆರೆಯ ಬಾಡಾ ಕ್ರಾಸ್‍ನಿಂದ ಮರಡಿ ಗ್ರಾಮದವರೆಗೆ ಬೃಹತ್ ರ‍್ಯಾಲಿ ನಡೆಸಲು ತಿರ್ಮಾನಿಸಲಾಗಿದೆ. ರ‍್ಯಾಲಿ ವೇಳೆ ಮೆರವಣಿಗೆ ಮುಂದೆ ಜೆಸಿಬಿ, ಅದರ ಹಿಂದೆ ಬೈಕ್‍ಗಳು, ಹಿಂದೆ ಕಾರಲ್ಲಿ ಯತ್ನಾಳ್, ಈಶ್ವರಪ್ಪ ಮರಡಿ ಗ್ರಾಮ ತಲುಪಲಿದ್ದಾರೆ. ಜೆಸಿಬಿ ರ‍್ಯಾಲಿ ಮೂಲಕ ಯತ್ನಾಳ್ ಯಾರಿಗೆ ಯಾವ ಸಂದೇಶ ಕೊಡಲು ತಿರ್ಮಾನಿಸಿದ್ದಾರೆ.
