ಉದಯವಾಹಿನಿ, ಬೆಂಗಳೂರು: ಬ್ಯಾಗ್ ಇಡುವ ನೆಪದಲ್ಲಿ ಖಾಸಗಿ ಅಂಗಕ್ಕೆ ಕೈ ಹಾಕಿ ಆಟೋ ಚಾಲಕ ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನ ಜೆಪಿ ನಗರದಲ್ಲಿ ನಡೆದಿದೆ.ಆಟೋ ಚಾಲಕನನ್ನು ಹನುಮಂತಪ್ಪ ಹೆಚ್ ತಳವಾರ ಎಂದು ಗುರುತಿಸಲಾಗಿದೆ. ಓರ್ವ ಯುವತಿ ಜೆಪಿ ನಗರದ ಏಳನೇ ಹಂತದಿಂದ ಆಟೋ ಬುಕ್ ಮಾಡಿದ್ದರು. ಆಟೋ ಲೋಕೇಶನ್‌ಗೆ ಬಂದ ತಕ್ಷಣ ಚಾಲಕ ಬ್ಯಾಗ್ ಇಡುವ ನೆಪದಲ್ಲಿ ಯುವತಿಯ ಮೈ ಮುಟ್ಟಿದ್ದ. ಅಲ್ಲದೇ ನೀನು ಸಿನಿಮಾ ಹಿರೋಯಿನ್ ತರಾ ಇದೀಯಾ ಎಂದಿದ್ದನಂತೆ. ಬಳಿಕ ಯುವತಿ ಆಟೋ ಒಳಗೆ ಕುಳಿತುಕೊಳ್ಳುತ್ತಿದ್ದಂತೆ ಜ್ವರ ಇದೀಯಾ ಎಂದು ಹಣೆ ಮುಟ್ಟಿ ಖಾಸಗಿ ಅಂಗಕ್ಕೆ ಕೈ ಹಾಕಿದ್ದಾನೆ.
ಈ ಕುರಿತು ಯುವತಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಕಾಮುಕನನ್ನು ಬಂಧಿಸಿದ್ದಾರೆ. ಜೊತೆಗೆ ಆತ ಕೆಲಸ ಮಾಡುತ್ತಿದ್ದ ಕ್ಯಾಬ್ ಕಂಪನಿಗೂ ಮಾಹಿತಿ ನೀಡಿ, ಆತನ ಲೈಸೆನ್ಸ್ ವಿರುದ್ಧ ಕ್ರಮ ತೆಗದುಕೊಳ್ಳಲು ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!