ಉದಯವಾಹಿನಿ, ಬಿರುಗಾಳಿʼ ಸಿನಿಮಾದ ʻಹೂವಿನ ಬಾಣದಂತೆ… ಯಾರಿಗೂ ಕಾಣದಂತೆ…ʼ ಹಾಡನ್ನ ತನ್ನದೇ ದಾಟಿಯಲ್ಲಿ ಹಾಡಿ ರಾತ್ರೋರಾತ್ರಿ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಕ್ರಿಯೆಟ್‌ ಮಾಡಿದ ಯುವತಿ ನಿತ್ಯಶ್ರೀಗೆ ಈಗ ಸಿನಿಮಾ ಆಫರ್‌ ಕೂಡ ಬಂದಿದೆಯಂತೆ. ಒಂದಿಬ್ಬರು ನಿರ್ದೇಶಕರು ತಮ್ಮ ಸಿನಿಮಾದಲ್ಲಿ ನಟಿಸುವಂತೆ ಯುವತಿಯನ್ನ ಸಂಪರ್ಕಿಸಿದ್ದಾರಂತೆ. ಆದ್ರೀಗ ʻಒಳ್ಳೆಯ ಹಾಡನ್ನ ಅಪಸ್ವರದಲ್ಲಿ ಹಾಡಿ ತಪ್ಪು ಮಾಡಿಬಿಟ್ಟೆʼ ಅಂತ ಆಕೆಗೆ ಗಿಲ್ಟ್‌ ಕಾಡೋಕೆ ಶುರುವಾಗಿದೆ ಅಂತ ʻಪಬ್ಲಿಕ್ ಟಿವಿʼ ಜೊತೆ ಮಾತನಾಡ್ತಾ ಕಣ್ಣೀರಿಟ್ದಿದ್ದಾಳೆ.
ರಾತ್ರೋ ರಾತ್ರಿ ಸ್ಟಾರ್‌ ಆದ ಮಂಡ್ಯದ ಹುಡ್ಗಿ
ಕಳೆದ ನಾಲ್ಕೈದು ದಿನಗಳಿಂದ ಸೋಷಿಯಲ್‌ ಮೀಡಿಯಾದ ಸೇರಿದಂತೆ ಎಲ್ಲರ ಬಾಯಲ್ಲಿ ‘ಹೂವಿನ ಬಾಣದಂತೆ’ ಹಾಡು ಕೇಳಿಬರುತ್ತಿದೆ. ‘ಬಿರುಗಾಳಿ’ ಚಿತ್ರದ ಈ ಹಾಡು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಯುವಕ, ಯುವತಿಯರಂತೂ ಈ ಹಾಡಿಗೆ ತಮ್ಮದೇ ರೀತಿಯಲ್ಲಿ ಸ್ಟೆಪ್‌ ಹಾಕಿ ರೀಲ್ಸ್‌ ಮಾಡೋಕೆ ಶುರು ಮಾಡಿದ್ದಾರೆ. ಈ ಹಾಡು ಇಷ್ಟೊಂದು ಫೇಮಸ್ ಆಗಲು ಕಾರಣ ಕೆ.ಆರ್‌ ಪೇಟೆ ಯುವತಿ ನಿತ್ಯಾಶ್ರೀ. ಸ್ನೇಹಿತರ ಗುಂಪಿನಲ್ಲಿ ತಮಾಷೆಗೆಂದು ಹಾಡಿದ ‘ಹೂವಿನ ಬಾಣದಂತೆ’ ಹಾಡು ಸದ್ಯ ಎಲ್ಲೆಡೆ ವೈರಲ್ ಆಗಿದೆ. ಇನ್‌ಸ್ಟಾದಲ್ಲಿ ನ್ಸ್ಟಾದಲ್ಲಿ ಮೊದಲು 150 ಮಂದಿ ಫಾಲೋವರ್ಸ್ ಅನ್ನು ಹೊಂದಿದ್ದ ನಿತ್ಯಾಶ್ರೀ ಈ ಹಾಡು ವೈರಲ್ ಆದ ಬಳಿಕ 40 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಅನ್ನು ಹೊಂದಿದ್ದಾಳೆ.

Leave a Reply

Your email address will not be published. Required fields are marked *

error: Content is protected !!