ಉದಯವಾಹಿನಿ,ಬೆಂಗಳೂರು: ಬಕ್ರಿದ್ ಹಬ್ಬದ ಪ್ರಯುಕ್ತ ಇಂದು ಮುಸ್ಲೀಂ ಬಾಂಧವರು ಶ್ರದ್ಧಾ ಭಕ್ತಿಯಿಂದ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ಬಿರಿಯಾನಿ ಕೂಡ ಊಣ ಬಡಿಸುತ್ತಾರೆ. ಹೀಗೆ ಸಿಎಂ ಸಿದ್ಧರಾಮಯ್ಯಗೆ ಬಕ್ರಿದ್ ಸಲುವಾಗಿ ಬಿರಿಯಾನಿಯನ್ನು ಆಟೋದಲ್ಲಿ ಸಚಿವ ಜಮೀರ್ ಕಳುಹಿಸಿ ಕೊಟ್ಟಿದ್ದಕ್ಕೆ ನೋ ಎಂಟ್ರಿ ಎಂದ ಪೊಲೀಸರು, ಅದೇ ಬಿರಿಯಾನಿಯನ್ನು ಬೆನ್ಜ್ ಕಾರಿಗೆ ಶಿಫ್ಟ್ ಮಾಡುತ್ತಿದ್ದಂತೆ ಒಳಗೆ ಕಳುಹಿಸಿಕೊಟ್ಟಿರುವಂತ ಸ್ವಾರಸ್ಯಕರ ಘಟನೆ ನಡೆದಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಇಂದು ಬಕ್ರಿದ್ ಹಬ್ಬದ ಪ್ರಯುಕ್ತ ಸಚಿವ ಜಮೀರ್ ಅಹ್ಮದ್ ಖಾನ್, ಬಿರಿಯಾನಿಯನ್ನು ಸ್ಪಷಲ್ ಆಗಿ ಮಾಡಿ ಆಟೋವೊಂದರಲ್ಲಿ ಕಳುಹಿಸಿದ್ದರು. ಸಚಿವ ಜಮೀರ್ ಅಹ್ಮದ್ ಅವರು ಬಿರಿಯಾನಿಯನ್ನು ಕಳುಹಿಸಿ ಕೊಟ್ಟಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ಕೊಡಬೇಕು ಒಳಗೆ ಬಿಡಿ ಅಂತ ಸಿಎಂ ನಿವಾಸದ ಮುಂದೆ ಕೋರಿದ್ದಾರೆ. ಆದ್ರೇ ಗೇಟ್ ನಲ್ಲಿ ಇದ್ದಂತ ಪೊಲೀಸರು ಮಾತ್ರ ಆಟೋವನ್ನು ಒಳಗೆ ಬಿಡಲು ನಿರಾಕರಿಸಿದ್ದಾರೆ. ಈ ಹಿನ್ನಲೆಯಲ್ಲಿ ಆಟೋದಲ್ಲಿ ಬಕ್ರಿದ್ ಪ್ರಯುಕ್ತ ಮಾಡಿದ್ದಂತ ಬಿರಿಯಾನಿಯನ್ನು ಮುಖ್ಯಮಂತ್ರಿಗೆ ತಲುಪಿಸುವ ಸಲುವಾಗಿ, ಅಲ್ಲಿಗೆ ಬೆನ್ಜ್ ಕಾರೊಂದು ಆಟೋ ಬಳಿ ನಿಲ್ಲಿಸಿ, ಆಟೋದಲ್ಲಿದ್ದಂತ ಬಿರಿಯಾನಿಯನ್ನು ಕಾರಿಗೆ ತುಂಬಿಕೊಂಡಿದೆ. ಆ ಕಾರನ್ನು ಪೊಲೀಸರು ಸಿಎಂ ನಿವಾಸದ ಒಳಗೆ ತೆರಳಲು ಬಿಟ್ಟಿದ್ದಾರೆ. ಈ ಮೂಲಕ ಆಟೋದಲ್ಲಿ ಬಂದಂತ ಬಿರಿಯಾನಿಗೆ ಅವಕಾಶ ಕೊಡದಂತ ಪೊಲೀಸರು ಬೆನ್ಜ್ ಕಾರಿನಲ್ಲಿ ತುಂಬಿದಂತ ಆದೇ ಬಿರಿಯಾನಿಯನ್ನು ಒಳಗೆ ಕೊಂಡೊಯ್ಯಲು ಬಿಟ್ಟಿರುವಂತ ಸ್ವಾರಸ್ಯಕರ ಪ್ರಸಂಗ ನಡೆದಿದೆ.
