ಉದಯವಾಹಿನಿ, ಅಬುಧಾಬಿ: ಹಮ್ಮರ್ H1 ಈಗಾಗಲೇ ವಿಶ್ವದ ಅತಿದೊಡ್ಡ SUV ಗಳಲ್ಲಿ ಒಂದೆಂದು ಪ್ರಸಿದ್ಧವಾಗಿದೆ. ಆದರೆ ದುಬೈ (Dubai) ರಾಜಮನೆತನದ ವ್ಯಕ್ತಿಯೊಬ್ಬರು ಅದನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ರೇನ್ಬೋ ಶೇಖ್ ಎಂದು ಪ್ರಸಿದ್ಧರಾಗಿರುವ ಶೇಖ್ ಹಮದ್ ಬಿನ್ ಹಮ್ದಾನ್ ಅಲ್ ನಹ್ಯಾನ್, ವಾಹನವನ್ನು ಮೂಲ ಮಾದರಿಗಿಂತ ಮೂರು ಪಟ್ಟು ದೊಡ್ಡದಾದ ದೈತ್ಯಾಕಾರದ ಗಾತ್ರದ ಆವೃತ್ತಿಯಾಗಿ ಮಾರ್ಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊವು (Viral Video) ಕಸ್ಟಮ್ H1 ಅನ್ನು ತೋರಿಸುತ್ತದೆ. ವೀಕ್ಷಕರು ಅದರ ಗಾತ್ರದಿಂದ ಬೆರಗುಗೊಂಡಿದ್ದಾರೆ.
ಹಮ್ಮರ್ H1 ಸಾಮಾನ್ಯ ಮಾದರಿಯು 184.5 ಇಂಚು ಉದ್ದ, 77 ಇಂಚು ಎತ್ತರ ಮತ್ತು 86.5 ಇಂಚು ಅಗಲವನ್ನು ಹೊಂದಿದೆ. ಆದರೆ, ಈ ದೈತ್ಯಾಕಾರದ ಆವೃತ್ತಿಯು ಎಲ್ಲಾ ಪ್ರಮಾಣಿತ ಆಯಾಮಗಳನ್ನು ಸುಲಭವಾಗಿ ಮರೆಮಾಡುತ್ತದೆ. ವಿಡಿಯೊವನ್ನು ಹಂಚಿಕೊಂಡ ಕಂಟೆಂಟ್ ಕ್ರಿಯೇಟರ್ ಈ ವಾಹನದ ಒಂದು ಟೈರ್‌ನ ಬೆಲೆ $25,000 ಎಂದು ಹೇಳಿಕೊಂಡಿದ್ದಾರೆ. ಸಾಮಾನ್ಯರು ಒಂದು ಟೈರ್‌ಗೆ ಆಗುವ ದುಡ್ಡಿನಲ್ಲಿ ಅದ್ಧೂರಿ ಮದುವೆ ಮಾಡಬಹುದು. ವ್ಯಕ್ತಿಯು ಅದರ ಒಳಾಂಗಣ ವಿನ್ಯಾಸವನ್ನು ಸಹ ತೋರಿಸಿದರು. ಇದು ಬಹುತೇಕ ಐಷಾರಾಮಿ ವಿಲ್ಲಾದಂತೆಯೇ ಕಾಣುತ್ತದೆ.
ಇನ್‌ಸ್ಟಾಗ್ರಾಮ್ ವಿಡಿಯೊದಲ್ಲಿ ಕಂಟೆಂಟ್ ಕ್ರಿಯೇಟರ್, ಇದು ವಿಶ್ವದ ಅತಿದೊಡ್ಡ ಕಾರು ಎಂದಿದ್ದಾರೆ. ಇದರ ಪ್ರತಿ ಟೈರ್‌ನ ಬೆಲೆ $25,000. ಇದು ಹಮ್ಮರ್ H1 ಗಿಂತ ಮೂರು ಪಟ್ಟು ಉದ್ದವಾಗಿದೆ, ಮೂರು ಪಟ್ಟು ಎತ್ತರವಾಗಿದೆ ಮತ್ತು ಮೂರು ಪಟ್ಟು ಅಗಲವಾಗಿದೆ. ಸ್ನೇಹಿತರೊಂದಿಗೆ ಮೋಜು ಮಾಡಲು, ವಿಶ್ರಾಂತಿ ಪಡೆಯಲು ಇದನ್ನು ಬಳಸಬಹುದು. ಅತಿದೊಡ್ಡ ವಿಂಡ್‌ಸ್ಕ್ರೀನ್ ವೈಪರ್‌ಗಳಿದ್ದು, ಅವು ನಾಲ್ಕು ಅಡಿ ಉದ್ದವಾಗಿವೆ. ಎಂಜಿನ್ ಒಂದು, ಎಂಜಿನ್ ಎರಡು, ಎಂಜಿನ್ ಮೂರು ಮತ್ತು ಎಂಜಿನ್ ನಾಲ್ಕು ಹೊಂದಿದ್ದು, ಪ್ರತಿಯೊಂದೂ ವಿಭಿನ್ನ ಇಗ್ನಿಷನ್ ಅನ್ನು ಹೊಂದಿದೆ. ಇದನ್ನು ನಿರ್ಮಿಸಲು ಏಳು ಜನರು ಒಂದೂವರೆ ವರ್ಷಗಳ ಕಾಲ ತೆಗೆದುಕೊಂಡರು.
