ಉದಯವಾಹಿನಿ, ವಾಷಿಂಗ್ಟನ್: ಫೆಡರಲ್ ರಿಸರ್ವ್ ಬಡ್ಡಿ ದರವನ್ನು ಕಡಿತಗೊಳಿಸಿದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬಿಟ್‌ಕಾಯಿನ್ ಹಿಡಿದಿರುವ 12 ಅಡಿ ಎತ್ತರದ ಚಿನ್ನದ ಪ್ರತಿಮೆಯನ್ನು ಯುಎಸ್ ಕ್ಯಾಪಿಟಲ್ ಹೊರಗೆ ಸ್ಥಾಪಿಸಲಾಗಿದೆ. ಡಿಜಿಟಲ್ ಕರೆನ್ಸಿಯ ಭವಿಷ್ಯ, ಹಣಕಾಸು ನೀತಿ ಮತ್ತು ಹಣಕಾಸು ಮಾರುಕಟ್ಟೆಗಳಲ್ಲಿ ಫೆಡರಲ್ ಸರ್ಕಾರದ ಪಾತ್ರದ ಬಗ್ಗೆ ಚರ್ಚೆ ಉಂಟು ಮಾಡಲು ಇದನ್ನು ನಿರ್ಮಿಸಲಾಗಿದೆ ಎನ್ನಲಾಗುತ್ತಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ(Social Media) ಭಾರಿ ವೈರಲ್ (Viral News) ಆಗುತ್ತಿದ್ದು, ಸಾಕಷ್ಟು ಮಂದಿಯ ಗಮನ ಸೆಳೆದಿದೆ.
ದೇಶಾದ್ಯಂತ ವಲಸೆ ಕಾರ್ಮಿಕರ ಕುರಿತು ಕಳವಳಗಳ ಹೆಚ್ಚಾಗುತ್ತಿರುವ ನಡುವೆಯೇ ಬುಧವಾರ ಫೆಡರಲ್ ರಿಸರ್ವ್ ತನ್ನ ಪ್ರಮುಖ ಬಡ್ಡಿ ದರವನ್ನು ಕಾಲು ಪಾಯಿಂಟ್ ಕಡಿತಗೊಳಿಸಿದ್ದು ಇದಕ್ಕೆ ಹೊಂದಿಕೆಯಾಗುವಂತೆ ಯುಎಸ್ ಕ್ಯಾಪಿಟಲ್ ಹೊರಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 12 ಅಡಿ ಎತ್ತರದ ಚಿನ್ನದ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.ಡಿಜಿಟಲ್ ಕರೆನ್ಸಿಯ ಭವಿಷ್ಯ, ಹಣಕಾಸು ನೀತಿ ಮತ್ತು ಹಣಕಾಸು ಮಾರುಕಟ್ಟೆಗಳಲ್ಲಿ ಫೆಡರಲ್ ಸರ್ಕಾರದ ಪಾತ್ರದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಲು ಈ ಪ್ರತಿಮೆಯನ್ನು ಸ್ಥಾಪಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದು, ಇದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಇದಕ್ಕೆ ಅನೇಕರು ಕಾಮೆಂಟ್ ಕೂಡ ಮಾಡಿದ್ದು, ಅಮೆರಿಕ ಅಧ್ಯಕ್ಷರು ಕ್ರಿಪ್ಟೋಕರೆನ್ಸಿ ಪರ ನಿಲುವನ್ನು ಹೊಗಳಲು ಈ ರೀತಿ ಮಾಡಿದ್ದಾರೆ. ಫೆಡರಲ್ ರಿಸರ್ವ್ ತನ್ನ ಪ್ರಮುಖ ಬಡ್ಡಿದರವನ್ನು ಬುಧವಾರ ಕಾಲು ಪಾಯಿಂಟ್ ನಷ್ಟು ಕಡಿತಗೊಳಿಸಿತು. ಇದು ತನ್ನ ಅಲ್ಪಾವಧಿಯ ದರವನ್ನು ಶೇಕಡಾ 4.1 ರಿಂದ ಶೇಕಡಾ 4.3 ಕ್ಕೆ ಇಳಿಸಿದೆ. ವರ್ಷದ ಆರಂಭದಲ್ಲಿ ಜೆರೋಮ್ ಪೊವೆಲ್ ಅವರ ನೇತೃತ್ವದ ಯುಎಸ್ ಫೆಡರಲ್ ರಿಸರ್ವ್ ಬಡ್ಡಿದರಗಳಲ್ಲಿ ಬದಲಾವಣೆಗಳನ್ನು ಮಾಡಿರಲಿಲ್ಲ.
