ಉದಯವಾಹಿನಿ, ನವದೆಹಲಿ: ಭಾರತೀಯ ಸಮಾಜದಲ್ಲಿ, ತಾಯಿ ಮತ್ತು ಮಗನ ನಡುವಿನ ಬಾಂಧವ್ಯವನ್ನು ಅತ್ಯಂತ ಪವಿತ್ರ ಮತ್ತು ಪೂಜ್ಯ ಸಂಬಂಧಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಈ ಸಂಬಂಧದಲ್ಲಿ ಹುದುಗಿರುವ ಮಮತೆ, ಪ್ರೀತಿ, ವಾತ್ಸಲ್ಯ ಮತ್ತು ಪರಸ್ಪರ ಗೌರವವನ್ನು ಪ್ರಶ್ನಾತೀತವೆಂದು ಪರಿಗಣಿಸಲಾಗುತ್ತದೆ. ಆದರೆ, ಸಾಮಾಜಿಕ ಮಾಧ್ಯಮದಲ್ಲಿ ಖ್ಯಾತಿ ಗಳಿಸಬೇಕು ಅನ್ನೋ ಉದ್ದೇಶದಿಂದ ಈ ಸಂಬಂಧವು ದುರ್ಬಲಗೊಳ್ಳುತ್ತಿದ್ದು, ನೈತಿಕ ರೇಖೆಗಳನ್ನು ದಾಟುತ್ತಿರುವಂತೆ ತೋರುತ್ತಿದೆ.
ಹೌದು, ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊವೊಂದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ವಿಡಿಯೊದಲ್ಲಿ, ಜಿಯಾ ವ್ಯಾಸ್ ಎಂಬ ಮಹಿಳೆ ತನ್ನ ಮಗನೊಂದಿಗೆ ಬಾಲಿವುಡ್ ಹಾಡಿನ ಸೆಕೆಂಡ್ ಹ್ಯಾಂಡ್ ಜವಾನಿ ಹಾಡಿಗೆ ನೃತ್ಯ ಮಾಡುತ್ತಿರುವುದು ಕಂಡುಬರುತ್ತದೆ. ಇದು ನೆಟ್ಟಿಗರ ಕೆಂಗಣ್ಣಿಗೆ ಕಾರಣವಾಗಿದೆ. ಇದು ಅನುಚಿತ ಮತ್ತು ಅಗೌರವದಿಂದ ಕೂಡಿದೆ ಎಂದು ಹೇಳಿದ್ದಾರೆ.ಜಿಯಾ ಕೆಂಪು ಹೃದಯದ ಚಿಹ್ನೆಗಳಿಂದ ಅಲಂಕರಿಸಲ್ಪಟ್ಟ ಬಿಳಿ ಸೀರೆಯನ್ನು ಧರಿಸಿದ್ದರೆ, ಆಕೆಯ ಮಗ ಜೀನ್ಸ್ ಮತ್ತು ಟಿ-ಶರ್ಟ್‌ನಲ್ಲಿ ಧರಿಸಿದ್ದಾನೆ. ವಿಡಿಯೊದಲ್ಲಿ, ಜಿಯಾ ತನ್ನ ಮಗನೊಂದಿಗೆ ನೃತ್ಯ ಮಾಡಿದ್ದಾಳೆ. ಪುತ್ರ ತನ್ನ ಮೊಬೈಲ್ ಫೋನ್‌ನಲ್ಲಿ ಇದನ್ನು ರೆಕಾರ್ಡ್ ಮಾಡಿದ್ದಾನೆ. ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.
