ಉದಯವಾಹಿನಿ, ಜಾರ್ಖಂಡ್: ಪ್ರೇಮಿಗಳ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಾರ್ಖಂಡ್‌ನಚತ್ರಾ ಜಿಲ್ಲೆಯ ಲಾಮ್ಟಾ ಗ್ರಾಮದಲ್ಲಿ ನಡೆದಿದ್ದು, ಪ್ರೀತಿಸಿದವನನ್ನೇ ಕೊಲೆ ಮಾಡಿ ಪ್ರಿಯತಮೆ ಕಂಬಿ ಎಣಿಸುತ್ತಿದ್ದಾಳೆ. ಲೇಟರ್ ಜಿಲ್ಲೆಯ ಸಸಾಂಗ್ ಗ್ರಾಮದ ಮುಂತಜೀರ್ (34)ಕೊಲೆಯಾದ ಯುವಕನಾಗಿದ್ದು, ಲಾಮ್ಟಾ ಮೂಲದ ಶಬ್ಬು ಪ್ರವೀನ್ ಅಲಿಯಾಸ್ ನೂರ್ಜಹಾನ್ (24) ಕೊಲೆ ಮಾಡಿದ ಆರೋಪಿಯಾಗಿದ್ದಾಳೆ. ಇಬ್ಬರಿಗೂ ಪರಿಚಯವಾಗಿ ಪ್ರೇಮಾಂಕುರವಾಗಿತ್ತು. ಈ ಹಿನ್ನಲೆಯಲ್ಲಿಯೇ ಮುಂತಜೀರ್ ನೂರ್ಜಹಾನ್ ಭೇಟಿಯಾಗಲು ಅಗಾಗ ಗ್ರಾಮಕ್ಕೆ ಲಾಮ್ಟಾ ಬಂದು ಹೋಗಿತ್ತಿದ್ದ. ಈ ಬಾರಿ ಪ್ರೇಯಸಿಯನ್ನು ಕಾಣುವುದರ ಜೊತೆ ಮದುವೆಯ ವಿಷಯ ಮಾತಾನಾಡಲು ಬಂದವ ಮಾತ್ರ ದುರಂತ ಹತ್ಯೆ ಕಂಡಿದ್ದಾನೆ.
ಹೌದು ಮದುವೆಯ ಕನಸನ್ನು ಹೊತ್ತು ನೂರ್ಜಹಾನ್‌ರನ್ನು ಭೇಟಿಯಾಗಲು ಲಾಮ್ಟಾ ಗ್ರಾಮಕ್ಕೆ ಮುಂತಜೀರ್ಬಂದಿದ್ದ. ಈ ವೇಳೆ ಮದುವೆ ವಿಚಾರವಾಗಿ ಇಬ್ಬರ ನಡುವೆ ಮಾತುಕತೆ ನಡೆದಿದೆ. ಮುಂತಜೀರ್ ಮದುವೆಯಾಗುವಂತೆ ನೂರ್ಜಹಾನ್ ಅನ್ನು ಪೀಡಿಸಿದ್ದು, ಮಾತು ಮಾತು ಬೆಳೆದು ಜಗಳ ತಾರಕ್ಕೇರಿದೆ. ಕೋಪದ ಕೈಗೆ ಬುದ್ಧಿಕೊಟ್ಟ ನೂರ್ಜಹಾನ್ ಚಾಕುವಿನಿಂದ ಮುಂತಜೀರ್ ಮೇಲೆ ಹಲ್ಲೆ ಮಾಡಿದ್ದಾಳೆ.
